ಪಾಕಿಸ್ತಾನದಲ್ಲಿ ಆಲ್-ಕೈದಾ ವಿರುದ್ದದ ಕಾರ್ಯಾಚರಣೆಗೆ ಅಮೆರಿಕ ತನ್ನ ಸೇನೆಯನ್ನು ರವಾನಿಸಲಿದೆ ಎನ್ನುವ ಅಮೆರಿಕ ಹೇಳಿಕೆಯನ್ನು ತಳ್ಳಿಹಾಕಿದ ಪಾಕ್ ಅಧ್ಯಕ್ಷ ಮುಷರಫ್ ಉಗ್ರರ ವಿರುದ್ದ ಹೋರಾಡಲು ಸೇನೆ ಸಜ್ಜಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿರುವ ಒಸಾಮಾ ಹಾಗೂ ಅಲ್‌ಕೈದಾ ನಾಯಕರುಗಳ ವಿರುದ್ದದ ಕಾರ್ಯಾಚರಣೆಗಾಗಿ ಅಗತ್ಯವಾದಲ್ಲಿ ಪಾಕಿಸ್ತಾನದ ಅಪ್ಪಣೆ ಇಲ್ಲದೇ ಅಮೆರಿಕ ತನ್ನ ಸೇನೆಯನ್ನು ಕಾರ್ಯಾಚರಣೆಗೆ ರವಾನಿಸಲಿದೆ ಎನ್ನುವ ಅಮೆರಿಕದ ಅಧ್ಯಕ್ಷ ಜಾರ್ಜಬುಷ್ ಅವರ ಹೇಳಿಕೆಯನ್ನು ನಾನು ಸಮರ್ಥಿಸುವುದಿಲ್ಲ ಎಂದು ಮುಷರಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದಕರ ಸುಳಿವು ದೊರೆತಲ್ಲಿ ಅವರ ವಿರುದ್ದ ಯಾವ ಕಾರ್ಯಾಚರಣೆ ನಡೆಸಬೇಕು ಎನ್ನುವುದನ್ನು ಅಮೆರಿಕ ಪಾಕಿಸ್ತಾನ ಜಂಟಿಯಾಗಿ ಚರ್ಚೆ ನಡೆಸಲಾಗುತ್ತದೆ. ಆದರೆ ಕಾರ್ಯಾಚರಣೆ ಮಾತ್ರ ಪಾಕಿಸ್ತಾನದ ಸೇನೆ ನಡೆಸುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಸೇನೆಯಲ್ಲಿ ಅಲ್‌ಕೈದಾ ಹಾಗೂ ತಾಲಿಬಾನ್ ಉಗ್ರರ ಬಗ್ಗೆ ಕಳಕಳಿಯುಳ್ಳ ಸಂಬಂಧಿತ ಅಧಿಕಾರಿಗಳಿದ್ದಾರೆ ಎನ್ನುವ ಆರೋಪವನ್ನು ಮುಷರಫ್ ಇದೊಂದು ನಿರಾಧಾರ ಆರೋಪವಾಗಿದೆ ಎಂದರು.
|