ಉಕ್ರೆನ್ ರಾಜಧಾನಿಯ ಹತ್ತಿರ ಸಣ್ಣ ಪ್ರಮಾಣದ ವಿಮಾನವೊಂದು ಅಪಘಾತಕ್ಕಿಡಾಗಿ, ಸ್ಥಳದಲ್ಲಿ ಐವರು ಮಂದಿ ಸಾವನ್ನಪ್ಪಿದ್ದಾರೆ ಎಂದು ತುರ್ತುಸೇವಾ ಅಧಿಕಾರಿಗಳು ತಿಳಿಸಿದ್ದಾರೆ.
ಜೆಕ್ ಗಣರಾಜ್ಯದಿಂದ ತುರ್ತುಸೇವೆಗಾಗಿ ಹೊರಟಿದ್ದ ಚಾರ್ಟರ್ ಬೀಚ್‌ಕ್ರಾಫ್ಟ್ ವಿಮಾನ ಅಪಘಾತಕ್ಕಿಡಾಗಿದೆ ಎಂದು ತುರ್ತುಸೇವಾ ಸಚಿವಾಲಯದ ವಕ್ತಾರ ಐಹೊರ್ ಕ್ರೋಲ್ ತಿಳಿಸಿದ್ದಾರೆ.
ತುರ್ತುಸೇವೆಗಾಗಿ ಹೊರಟಿದ್ದ ಚಾರ್ಟರ್ ಬೀಚ್‌ಕ್ರಾಫ್ಟ್ ವಿಮಾನ ಮುಖ್ಯ ಹೆದ್ದಾರಿಗೆ ಕೇವಲ ನೂರು ಮೀಟರ್ ದೂರದಲ್ಲಿ ಅಪಘಾತಕ್ಕಿಡಾಗಿದ್ದು, ಬೆಂಕಿಯುಂಡೆಗಳು ಹೊರಹೊಮ್ಮಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಮಾನದ ಮಾಲೀಕರು ಯಾರು ಎಂದು ಇಲ್ಲಿಯವರೆಗೆ ತಿಳಿದುಬಂದಿಲ್ಲ ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|