ನೆಬ್ರಾಸ್ಕಾದಲ್ಲಿ ಶಾಪಿಂಗ್ ಮಾಲ್‌ವೊಂದರಲ್ಲಿ ಇತ್ತೀಚೆಗಷ್ಟೇ ಯುವಕನೊಬ್ಬ ಒಂಬತ್ತು ಮಂದಿಯನ್ನು ಗುಂಡಿಕ್ಕಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿ ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ, ಮತ್ತೆ ಇಂತಹ ಘಟನೆಯೊಂದು ಅಮೆರಿಕದ ಕೊಲೊರಾಡೊ ರಾಜ್ಯದಲ್ಲಿ ಸಂಭವಿಸಿದೆ.
ಕೊಲೊರಾಡೊ ರಾಜ್ಯದಲ್ಲಿರುವ ಚರ್ಚ್ ಹಾಗೂ ಮಿಷಿನರಿಯಲ್ಲಿ ಬಂದೂಕುಧಾರಿಯೊಬ್ಬ ನಾಲ್ಕು ಮಂದಿಯನ್ನು ಗುಂಡಿಕ್ಕಿ ಕೊಂದಿದ್ದಲ್ಲದೆ, ತಾನು ಅದಕ್ಕೆ ಬಲಿಯಾಗಿದ್ದಾನೆ. ಈ ಘಟನೆಯಲ್ಲಿ ಸುಮಾರು ಆರು ಮಂದಿ ಕೂಡ ಗಾಯಗೊಂಡಿದ್ದಾರೆ.
ರಾತ್ರಿಯಾಗಿರುವುದರಿಂದ ನಿಷೇಧಕ್ಕೆ ಅವಕಾಶವಿಲ್ಲ ಎಂದು ಮಿಷನರಿ ಸಿಬ್ಬಂದಿಗಳು ನಿರಾಕರಿಸಿದ್ದಕ್ಕೆ ಅವರ ಮೇಲೆ ರಾತ್ರಿ 12.30 ರ ಸುಮಾರಿಗೆ ಅರ್ವಾಡಾದಲ್ಲಿರುವ ಮಿಷನ್ ಸಿಬ್ಬಂದಿಯ ಯುವಕರಿಗಾಗಿ ನೀಡುವ ಮಿಷಿನರಿ ತರಬೇತಿ ಕೇಂದ್ರದ ಇಬ್ಬರು ಸಿಬ್ಬಂದಿ ಸದಸ್ಯರನ್ನು ಬಂದೂಕುನಿಂದ ಹತ್ಯೆ ಮಾಡಿದ್ದಾನೆ. ಜೊತೆಗೆ ಈ ಘಟನೆಯಲ್ಲಿ ಇಬ್ಬರು ಮಂದಿ ಗಾಯಗೊಂಡಿದ್ದಾರೆ.
ಈ ಮೊದಲ ಘಟನೆ ಜರುಗಿದ 12 ಗಂಟೆಗಳ ನಂತರ ಇಲ್ಲಿಂದ ಸುಮಾರು 112 ಕಿ.ಮೀ. ದೂರದಲ್ಲಿರುವ ಕೊಲೊರಾಡೊ ರಾಯ್ದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ನ್ಯೂ ಲೈಫ್ ಚರ್ಚ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದರಿಂದ ಒರ್ವ ವ್ಯಕ್ತಿ ಮೃತಪಟ್ಟಿದ್ದು, ಇದಕ್ಕೆ ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಸುಮಾರು 7,000 ಮಂದಿ ಚರ್ಚ್‍ನಲ್ಲಿ ತಮ್ಮ ಮುಂಜಾವಿನ ಕಾರ್ಯವನ್ನು ಮುಗಿಸಿ ಹೊರಬರುವಷ್ಟರಲ್ಲಿ ಅವರನ್ನೆ ಗುರಿಯಾಗಿಸಿಕೊಂಡು ನಡೆಸಿದನಾದರೂ, ಭದ್ರತಾ ಸಿಬ್ಬಂದಿಯು ಅವನನ್ನು ತಡೆದಿದ್ದರಿಂದ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಒರ್ವ ಮಾತ್ರ ಬಲಿಯಾಗಿದ್ದಾನೆ.
ಇವೆರಡೂ ಗುಂಡಿನ ದಾಳಿಯು ಒಂದಕ್ಕೊಂದು ಪೂರಕವಾಗಿರಬಹುದೆಂದು ಶಂಕಿಸಲಾಗಿದೆ. ಇವೆರಡೂ ದಾಳಿಯನ್ನು ಒಬ್ಬನೇ ಮಾಡಿರುವ ಕುರಿತು ಖಚಿತವಾಗಿಲ್ಲ ಎಂದು ಅರ್ವಾಡಾ ಪೊಲೀಸ್ ಮುಖ್ಯಸ್ಥ ಡಾನ್ ವಿಕ್ ಹೇಳಿದ್ದು, ಇದರಲ್ಲಿ 20 ವರ್ಷದ ಯುವಕನು ಇದ್ದಾನೆ ಎಂಬುವುದು ಖಚಿತವಾಗಿದೆ ಎಂದರು.
|