ಮ್ಯಾನ್ಮರ್ ಕುರಿತಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಳ್ಮೆ ಅಂತ್ಯವಾಗುತ್ತಿದ್ದು ,ಪ್ರಜಾಪ್ರಭುತ್ವವನ್ನು ಪುನರ್‌ಸ್ಥಾಪಿಸಿ ದೇಶದ ಜನರನ್ನು ಹಿಂಸಾಚಾರದಿಂದ ಮುಕ್ತಗೊಳಿಸಬೇಕು ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿಬಾನ್ ಕಿ ಮೂನ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯ ತಾಳ್ಮೆಯಿಂದ ಮ್ಯಾನ್ಮಾರ್ ಬೆಳವಣಿಗೆಗಳನ್ನು ವಿಕ್ಷೀಸುತ್ತಿದ್ದು, ಇನ್ನು ಹೆಚ್ಚಿನ ತಾಳ್ಮೆಯಿಂದ ಇರಲು ಸಾಧ್ಯವಿಲ್ಲ ಎಂದು ಬಾನ್ ಕೀ ಮೂನ್ ಸ್ಪಷ್ಟಪಡಿಸಿದ್ದಾರೆ.
ಬಹು ವರ್ಷಗಳಿಂದ ಮನ್ಯಾನ್ಮಾರ್ ಜನತೆ ಮಿಲಿಟರಿ ಅಡಳಿತದಿಂದ ಬೇಸರಗೊಂಡಿದ್ದು, ಈಗ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವದ ಅನುಭವವನ್ನು ಜನತೆಗೆ ನೀಡಬೇಕಾಗಿದೆ ಎಂದರು.
ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಹೋರಾಟ ಮಾಡುತ್ತಿರುವ 31 ಜನರನ್ನು ಮಿಲಿಟರಿ ಅಡಳಿತ ಹತ್ಯೆ ಮಾಡಲಾಗಿದೆ ಎದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿಗಳು ತಿಳಿಸಿದ್ದಾರೆ.
|