ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಸಮಾ ಬಗ್ಗೆ ಸೇನೆಯಲ್ಲಿ ಅನುಕಂಪವಿಲ್ಲ
ಪಾಕಿಸ್ತಾನ ಸೇನೆಯಲ್ಲಿ ಆಲ್‌ಕೈದಾ ನಾಯಕ ಒಸಮಾ ಬಿನ್ ಲಾಡೆನ್ ಬಗ್ಗೆ ಅನುಕಂಪವಿದೆ ಎನ್ನುವ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿದ ಪಾಕ್ ಅಧ್ಯಕ್ಷ ಮುಷರಫ್ ಒಸಮಾ ಭೇಟೆಗಾಗಿ ಸತತ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಅಫಘಾನಿಸ್ಥಾನದ ಕುಣಾರ್ ಪ್ರಾಂತ್ಯದ ಬಜೌರ್ ಪ್ರದೇಶದಲ್ಲಿ ಒಸಮಾ ಬಿನ್ ಲಾಡೆನ್ ನೆಲೆಸಿರಬಹುದು ಎಂದು ಮುಷರಫ್ ಶಂಕೆ ವ್ಯಕ್ತಪಡಿಸಿದರು.

ಎರಡು ತಿಂಗಳುಗಳ ಹಿಂದೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಮಾಜಿ ಮುಖಸ್ಥ ಲೆಫ್ಟಿನೆಂಟ್ ಜನರಲ್ ಅಸಾದ್ ದುರ್ರಾನಿ , ಒಸಮಾ ಬಿನ್ ಲಾಡೆನ್ ನಗರ ಪ್ರದೇಶದಲ್ಲಿದ್ದು,ಯಾವುದೇ ಗುಹೆಯಲ್ಲಿ ಅಲ್ಲ ಎಂದು ಹೇಳಿಕೆ ನೀಡಿದ್ದರು.

ಜಗತ್ತಿನ ಪ್ರಖ್ಯಾತ ಆಲ್‌ಕೈದಾ ಉಗ್ರಗಾಮಿ ಸಂಘಟನೆಗಳ ನಾಯಕರು ಪಾಕಿಸ್ತಾನದ ನಗರಗಳ ಹತ್ತಿರದಲ್ಲಿದ್ದಾರೆ ಅಥವಾ ನಗರದಲ್ಲಿದ್ದಾರೆ.ಈ ಸ್ಥಳಗಳಲ್ಲಿ ಅಡಗಿ ಕಾರ್ಯಾಚರಣೆ ನಡೆಸುವುದು ಸುಲಭವಾಗುತ್ತದೆ ಐಎಸ್ಐ ಮಾಜಿ ಮುಖಸ್ಥ ಲೆಫ್ಟಿನೆಂಟ್ ಜನರಲ್ ಅಸಾದ್ ದುರ್ರಾನಿ ಅಬಿಪ್ರಾಯ ವ್ಯಕ್ತಪಡಿಸಿದ್ದರು.
ಮತ್ತಷ್ಟು
ತಾಳ್ಮೆ ಅಂತ್ಯ, ಮ್ಯಾನ್ಮರ್‌ಗೆ ಯುಎನ್ ಎಚ್ಚರಿಕೆ
ತಮಿಳು ಸೆಲ್ವನ್ ಶಾಂತಿಸಂಧಾನಕಾರನಲ್ಲ
ಕೊರಿಯಾಗಳಿಗೆ 50 ದಶಕದ ನಂತರ ರೈಲು ಸಂಪರ್ಕ
ಕೊಲೊರಾಡೊದಲ್ಲಿ ಶೂಟೌಟ್: ನಾಲ್ಕು ಬಲಿ
ಉಗ್ರರಿಂದ 40 ಮಹಿಳೆಯರ ಹತ್ಯೆ
ವಿಮಾನ ಅಪಘಾತ ಐವರ ಸಾವು