ಅರ್ಜೆಂಟಿನಾ ದೇಶದ ಮೊದಲ ಮಹಿಳಾ ರಾಷ್ಟ್ರಧ್ಯಕ್ಷೆಯಾಗಿ ಕ್ರಿಸ್ಟಿಯಾನಾ ಫರ್ನಾಂಡಿಝ್ ಅಧಿಕಾರ ಸ್ವೀಕರಿಸಿದರು.
ಕ್ರಿಸ್ಟಿಯಾನಾ ಫರ್ನಾಂಡಿಝ್ ಅವರ ಅವಧಿ ನಾಲ್ಕು ವರ್ಷಗಳಾಗಿದ್ದು, ಬಾಳಸಂಗಾತಿಯಾದ ಮಾಜಿ ರಾಷ್ಟ್ರಪತಿ ನೆಸ್ಟರ್ ಕ್ರಿಚನರ್ ಅವರ ನೀತಿಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ.
ಸಂಸತ್ತಿನಲ್ಲಿ ಕ್ರಿಚನರ್ ಅವರ ಪಕ್ಷ ಬಹುಮತಗಳಿಸಿದ ಹಿನ್ನೆಲೆಯಲ್ಲಿ ಸೆನೆಟರ್ ಕ್ರಿಸ್ಟಿಯಾನಾ ಫರ್ನಾಂಡಿಝ್ ಅವರನ್ನು ರಾಷ್ಟ್ರಧ್ಯಕ್ಷೆ ಸ್ಥಾನಕ್ಕೆ ಬಹುಮತಗಳಿಂದ ಆಯ್ಕೆ ಮಾಡಲಾಯಿತು.
ಕ್ರಿಚನರ್ ದಂಪತಿಗಳು ಪ್ರಭಾವಶಾಲಿ ದಂಪತಿಗಳಾಗಿದ್ದು, ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಬಿಲ್ ಕ್ಲಿಂಟನ್ ಹಾಗೂ ಪ್ರಸ್ತುತ ರಾಷ್ಟ್ರಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ ಹಿಲೆರಿ ಕ್ಲಿಂಟನ್ ಅವರಿಗೆ ಹೋಲಿಸಲಾಗುತ್ತಿದೆ.ಕೆಲ ವಿಶ್ಲೆಷಕರು ಅವರನ್ನು ದಕ್ಷಿಣದ ಕ್ಲಿಂಟನ್ ದಂಪತಿಗಳು ಎಂದು ಸಂಭೋದಿಸಿತ್ತಾರೆ.
ಬಾಳಸಂಗಾತಿಯಾದ ಮಾಜಿ ರಾಷ್ಟ್ರಪತಿ ನೆಸ್ಟರ್ ಕ್ರಿಚನರ್ ಅವರ ನೀತಿಗಳಾದ ಬಡತನ ನಿರ್ಮೂಲನೆ,ಅರ್ಥಿಕ ನೀತಿಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಕ್ರಿಸ್ಟಿಯಾನಾ ಫರ್ನಾಂಡಿಝ್ ಅಧಿಕಾರ ಸ್ವೀಕಾರದ ಸಮಾರಂಭದಲ್ಲಿ ಹೇಳಿದ್ದಾರೆ.
ಅರ್ಜೈಂಟಿನಾ ದೇಶದಲ್ಲಿ ಬಡತನ ನಿರ್ಮೂಲನೆಗಾಗಿ ಉತ್ತಮ ಆರ್ಥಿಕತೆಗಾಗಿ ನಿರಂತರ ಶ್ರಮವಹಿಸಲಾಗುವುದು ಎಂದು ರಾಷ್ಟ್ರಾಧ್ಯಕ್ಷೆ ಕ್ರಿಸ್ಟಿಯಾನಾ ಫರ್ನಾಂಡಿಝ್ ಹೇಳಿದ್ದಾರೆ.
|