ಮುಂಬರುವ ಜನೆವರಿಯಲ್ಲಿ ನಡೆಯಲಿರುವ ಚುನಾವಣೆ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿರುವಂತೆ ನೋಡಿಕೊಳ್ಳಬೇಕೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಪಾಕ್ ಅಧ್ಯಕ್ಷ ಮುಷರಫ್ ಅವರಿಗೆ ಸಲಹೆ ನೀಡಿದ್ದಾರೆ.
ಪಾಕಿಸ್ತಾನ ನಿಜವಾದ ಪ್ರಜಾಪ್ರಭುತ್ವಕ್ಕೆ ಮರಳುವಲ್ಲಿ ಈ ಚುನಾವಣೆ ಮಹತ್ತರ ಪಾತ್ರವಹಿಸುವುದರಿಂದ ಮುಕ್ತ ಹಾಗೂ ನಿಷ್ಪಕ್ಷಪಾತ ಮತದಾನ ನಡೆಯುವುದು ಅನಿವಾರ್ಯವಾಗಿದೆ ಎಂದು ರೈಸ್ ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದನೆ ವಿರುದ್ದದ ಹೋರಾಟಕ್ಕೆ ಅಮೆರಿಕ ಸರ್ವಬೆಂಬಲವನ್ನು ನೀಡುತ್ತಿದ್ದು, ಚುನಾವಣೆಯಲ್ಲಿ ಪಾಲ್ಗೊಳ್ಳುವುದರಿಂದ ಪ್ರತ್ಯೇಕತೆಯ ಹೋರಾಟವನ್ನು ಹತ್ತಿಕ್ಕಬಹುದು ಎಂದು ರೈಸ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದ್ದು ದೇಶದಲ್ಲಿ ಬೇರೂರಿವೆ. ಅವುಗಳನ್ನು ಬುಡಸಮೇತ ಕಿತ್ತುಹಾಕಲು ಆಧುನಿಕ ಸೇನೆಯ ಅಗತ್ಯವಿದೆ ಎಂದು ರೈಸ್ ನುಡಿದರು.
|