ಅಮೆರಿಕದ ನ್ಯಾಟೋಪಡೆಗಳು ಹಾಗೂ ಅಫಘಾನಿಸ್ಥಾನ್ ಸೇನೆ ತಾಲಿಬಾನ್ ಹಿಡಿತದಲ್ಲಿದ್ದ ಮೂಸಾಖಲಾ ಪಟ್ಟಣವನ್ನು ಹೆಚ್ಚಿನ ಘರ್ಷಣೆ ಇಲ್ಲದೇ ಮರುವಶ ಮಾಡಿಕೊಂಡಿವೆ.
ಅಫಘಾನಿಸ್ಥಾನದ ಕೇಂದ್ರದಲ್ಲಿರುವ ಮೂಸಾಖಲಾ ಪ್ರದೇಶವನ್ನು ತಾಲಿಬಾನಿಗಳು ವಶಪಡಿಸಿಕೊಂಡು ತಮ್ಮ ಶರೀಯತ್ ಕಾನೂನು ಜಾರಿಗೆ ತಂದು ಅಡಳಿತ ನಡೆಸುತ್ತಿದ್ದರು.ಆದರೆ ಅಮೆರಿಕ ನೇತ್ರತ್ವದ ನ್ಯಾಟೋ ಸೇನಾಪಡೆಗಳು ಭಾರಿ ಕಾರ್ಯಾಚರಣೆ ನಡೆಸಿ ಮರುವಶಕ್ಕೆ ತೆಗೆದುಕೊಂಡಿವೆ
ತಾಲಿಬಾನಿಗಳು ವಿರುದ್ದ ನಡೆದ ರಾತ್ರಿ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರಿ ಬಾಂಬ್ ದಾಳಿ ನಡೆಸಿದಾಗ ಸ್ಥಳಿಯ ನಾಯಕರು ತಾವು ಶರಣಾಗುವುದಾಗಿ ಘೋಷಿಸಿದರು.
|