ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅವಳಿ ಕಾರ್‌ಬಾಂಬ್ ಸ್ಪೋಟ:67 ಸಾವು
ಅಲ್ಜಿರಿಯಾದ ಅಲ್ಜಿರ್ಸ್‌ನಲ್ಲಿ ಸಂಭವಿಸಿದ ಎರಡು ಶಕ್ತಿಶಾಲಿ ಬಾಂಬ್ ಸ್ಪೋಟಗಳಲ್ಲಿ ಕನಿಷ್ಟ 67 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲವಾದರೂ ಉತ್ತರ ಆಫ್ರಿಕಾದ ಆಲ್‌ಕೈದಾ ಉಗ್ರರ ಕೃತ್ಯವಿರಬಹುದೆಂದು ಶಂಕಿಸಲಾಗಿದೆ. ಕಳೆದ ಎಪ್ರಿಲ್ ತಿಂಗಳಲ್ಲಿ ಅಲ್ಜಿರ್ಸ್‌ನಲ್ಲಿ ಇದೇ ರೀತಿಯ ಸ್ಪೋಟಗಳು ನಡೆದು ವಿದೇಶಿ ಹೂಡಿಕೆದಾರರಿಗೆ ಬೆದರಿಕೆ ಒಡ್ಡಿದ್ದವು.

ಉತ್ತರ ಆಫ್ರಿಕಾದಲ್ಲಿರುವ ಇಸ್ಲಾಮಿಕ್ ಉಗ್ರರು ಮಾನವತೆಯ ವಿರೋಧಿಗಳು ಎಂದು ಅಮೆರಿಕದ ವೈಟ್‌ಹೌಸ್ ಅಕ್ರೋಶ ವ್ಯಕ್ತಪಡಿಸಿದೆ. ಘಟನೆಯಲ್ಲಿ ವಿಶ್ವಸಂಸ್ಥೆಯ ನಿರಾಶ್ರಿತ ಏಜೆನ್ಸಿ ಉದ್ಯೋಗಿ ಸಾವನ್ನಪ್ಪಿದ್ದು ಇನ್ನೊಬ್ಬನು ಕಾಣೆಯಾಗಿದ್ದಾನೆ ಎಂದು ವಿವರ ನೀಡಿದೆ.

ಬೆನ್‌ನೋನ್ ಜಿಲ್ಲೆಯಲ್ಲಿ ನ್ಯಾಯಾಲಯದ ಕಟ್ಟಡ, ವಿಶ್ವ ಸಂಸ್ಥೆ ಕಚೇರಿಯ ಹತ್ತಿರವಿರುವ ಹ್ರೈಡ್ರಾ ಪೋಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದು, ಎರಡು ಸ್ಥಳಗಳಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಕಚೇರಿಗಳಿವೆ ಎಂದು ಆಂತರಿಕ ಖಾತೆ ಸಚಿವ ನೂರೂದ್ದಿನ್ ಯಾಝಿದ್ ತಿಳಿಸಿದ್ದಾರೆ.

ಸ್ಪೋಟದಲ್ಲಿ ಮೃತರಾದವರ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಶ್ರೀಲಂಕಾ: 40 ಉಗ್ರರು, ನಾಲ್ವರು ಸೈನಿಕರ ಸಾವು
ನ್ಯಾಟೋಪಡೆಗಳಿಂದ ಮೂಸಾಖಲಾ ಮರುವಶ
ಮುಕ್ತ ಚುನಾವಣೆ: ಪ್ರಜಾಪ್ರಭುತ್ವಕ್ಕೆ ನಾಂದಿ
ಅರ್ಜೈಂಟಿನಾ: ಮಹಿಳಾ ರಾಷ್ಟ್ರಾಧ್ಯಕ್ಷೆಯಾಗಿ ಕ್ರಿಸ್ಟಿಯಾನಾ
ಒಸಮಾ ಬಗ್ಗೆ ಸೇನೆಯಲ್ಲಿ ಅನುಕಂಪವಿಲ್ಲ
ತಾಳ್ಮೆ ಅಂತ್ಯ, ಮ್ಯಾನ್ಮರ್‌ಗೆ ಯುಎನ್ ಎಚ್ಚರಿಕೆ