ಪಾಕಿಸ್ತಾನ ಪೀಪಲ್ಸ್ ಪಕ್ಷ ಜನೆವರಿಯಲ್ಲಿ ನಡೆಯುವ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಬಹುದಾದರೂ ಸ್ಪಷ್ಟ ಬಹುಮತಕ್ಕಾಗಿ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡುವ ಅಗತ್ಯವಿದೆ ಎಂದು ಪಾಕ್ ಮಾಜಿ ಪ್ರಧಾನಿ ಬೆನ್‌ಜಿರ್ ಭುಟ್ಟೋ ಹೇಳಿದ್ದಾರೆ.
ಭುಟ್ಟೋ ನವಾಜ್ ಷರೀಫ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮಾತುಕತೆ ನಡೆಯುತ್ತಿವೆ. ಆದರೆ ಪಾಕ್ ಅಧ್ಯಕ್ಷ ಮುಷರಫ್ ಅಥವಾ ಮೌಲ್ವಿಗಳೊಂದಿಗೆ ಹೊಂದಾಣಿಕೆ ಸಾಧ್ಯವಿಲ್ಲ ಎಂದು ತಳ್ಳಿ ಹಾಕಿದ್ದಾರೆ.
ಮುಷರಫ್ ಬೆಂಬಲಿತ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷಕ್ಕೆ ದೇಶದಲ್ಲಿ ಬೆಂಬಲವಿಲ್ಲ ಎಂದು ಆಗ್ನೆಯ ಭಾಗದಲ್ಲಿರುವ ಮರ್ದಾನ್ ಪಟ್ಟಣದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬಹುಮತ ದೊರೆಯುತ್ತದೆ. ಆ ಪಕ್ಷದ ಸಹಕಾರದಿಂದ ಅಡಳಿತ ನಡೆಸಲಾಗುವುದು ಎಂದು ಮುಷರಫ್ ಹೇಳಿದ್ದಾರೆ.
|