ವಿರೋಧ ಪಕ್ಷಗಳಿಗೆ ಪಾಕಿಸ್ತಾನದ ಅಧ್ಯಕ್ಷ ಮುಷರಫ್ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪಗಳಲ್ಲಿ ಸಂತ್ಯಾಂಶವಿಲ್ಲ ಚುನಾವಣೆಯಲ್ಲಿ ಗೆಲುವು ಸಾಧಿಸುವ ಪಕ್ಷದೊಂದಿಗೆ ಕರ್ತವ್ಯ ನಿರ್ವಹಿಸುವುದಾಗಿ ಮುಷರಫ್ ಹೇಳಿದ್ದಾರೆ.
ಪಾಕಿಸ್ತಾನದ ಪ್ರಮುಖ ನವಾಜ್ ಷರೀಫ್ ನೇತ್ರತ್ವದ ಪಕ್ಷ ಸರ್ವಾಧಿಕಾರಿಯನ್ನು ಅಂತ್ಯಗೊಳಿಸುವಂತೆ ಪ್ರಚಾರ ಮಾಡುತ್ತಿರುವುದನ್ನು ಖಂಡಿಸಿದ ಮುಷರಫ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಪಕ್ಷದೊಂದಿಗೆ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದ್ದಾರೆ.
ನಾನು ಜನತೆಯೊಂದಿಗೆ ಹೊಂದಾಣಿಕೆಯಿಂದ ಇರಲು ಬಯಸುತ್ತೇನೆ. ನಾನು ಉದ್ದೇಶಪೂರ್ವಕವಾಗಿ ಯಾರಿಗೂ ಕಿರುಕುಳ ಕೊಡಲು ಇಚ್ಚಿಸುವುದಿಲ್ಲ ಎಂದು ಅಲ್‌ಜಜೀರಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪಾಕ್ ಮಾಜಿ ಪ್ರಧಾನಿಗಳಾದ ಬೆನ್‌ಜಿರ್ ಭುಟ್ಟೋ ಹಾಗೂ ನವಾಜ್ ಷರೀಫ್ ಮೂರನೇಯ ಅವಧಿಗೆ ಪ್ರಧಾನ ಮಂತ್ರಿ ಹುದ್ದೆಗೆ ಅನರ್ಹರಾಗಿದ್ದರೂ ಮುಷರಫ್ ಅಡಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
|