ಅಲ್ಜಿರ್ಸ್‌ನಲ್ಲಿ ನಡೆದ ಅವಳಿ ಬಾಂಬ್‌ಸ್ಪೋಟದಲ್ಲಿ 67 ಮಂದಿ ಸಾವಿಗೆ ತಾವುಗಳು ಹೊಣೆಯಾಗಿದ್ದೇವೆ ಎಂದು ಅಲ್‌ಕೈದಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಉತ್ತರ ಆಫ್ರಿಕಾದಲ್ಲಿರುವ ಅಲ್‌ಕೈದಾ ಸಂಘಟನೆ ಇಸ್ಲಾಮಿಸ್ಟ್ ಸೈಟ್ ಒಂದರಲ್ಲಿ ಪ್ರಕಟಣೆಯೊಂದನ್ನು ಹೊರಡಿಸಿ. ತಮ್ಮ ತಂಡದ ಇಬ್ಬರು ಸದಸ್ಯರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದೆ.
ಬಾಂಬ್‌ಸ್ಪೋಟದಲ್ಲಿ ಅಧಿಕಾರಿಗಳು 26 ಮಂದಿ ಮೃತರಾಗಿದ್ದಾರೆ ಎಂದು ಘೋಷಿಸಿದ್ದು ಅದನ್ನು ತಳ್ಳಿಹಾಕಿದ ಆರೋಗ್ಯ ಸಚಿವಾಲಯ ಮೃತರ ಸಂಖ್ಯೆ 67ಕ್ಕೆ ಎರಿದೆ ಎಂದು ಹೇಳಿದೆ.
ಬಾಂಬ್‌ಸ್ಪೋಟದಲ್ಲಿ ಮೃತರಾದವರ ವಿವರಗಳನ್ನು ಪ್ರಕಟಿಸಲು ಸರಕಾರಕ್ಕೆ ಹಿಂಜರಿಕೆ ಇಲ್ಲ. ಆದರೆ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಮೃತರ ಸಂಖ್ಯೆಯನ್ನು ಹೆಚ್ಚಿಸಿ ತೋರಿಸುವುದು ಅನೈತಿಕ ಎಂದು ಪ್ರಧಾನ ಮಂತ್ರಿ ಅಬ್ದೇಲ್ ಅಜೀಜ್ ಕಿಡಿಕಾರಿದ್ದಾರೆ.
|