ಪಾಕಿಸ್ತಾನದ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ ಕೊಲೆಯತ್ನವನ್ನು ವಿಫಲಗೊಳಿಸಿ, ಗ್ಲೋಬಲ್ ಟೆರರಿಸ್ಟ್ ನೆಟ್‌ವರ್ಕ್ ಸದಸ್ಯರನ್ನು ಬಂಧಿಸಿರುವುದಾಗಿ ಪಾಕ್ ಗುಪ್ತಚರ ದಳ ಪ್ರಕಟಿಸಿವೆ.
ಕರಾಚಿಯ ಮಲೀರ್ ಪ್ರದೇಶದಲ್ಲಿರುವ ಅಲ್‌ಕೈದಾ ಅಡುಗುತಾಣದ ಮೇಲೆ ದಾಳಿ ಮಾಡಿ ಉಗ್ರರನ್ನು ಬಂಧಿಸಲಾಗಿದೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮುಷರಫ್ ಮುಂದಿನ ತಿಂಗಳಲ್ಲಿ ಕರಾಚಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹತ್ಯೆಯನ್ನು ಮಾಡಲು ಉಗ್ರರು ಕಾರ್ಯತಂತ್ರವನ್ನು ರೂಪಿಸಿದ್ದರು ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಕರಾಚಿ ವಿಮಾನ ನಿಲ್ದಾಣದಿಂದ ಶಹರಾ-ಎ- ಫೈಸಲ್ ಮಾರ್ಗವಾಗಿ ಮುಷರಫ್ ಡ್ರಿಗ್ ರಸ್ತೆ ಮೂಲಕ ಸಾಗುವಾಗ ಸಂಪೂರ್ಣ ಸೇತುವೆಯನ್ನು ಸ್ಪೋಟಿಸಲು ಉಗ್ರರು ಸಿದ್ದತೆ ನಡೆಸಿದ್ದರು ಎನ್ನುವ ಅಂಶ ತನಿಖೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಸೇನಾ ನೆಲೆಗಳು ಹಾಗೂ ವಿದೇಶಿ ರಾಯಭಾರಿ ಕಚೇರಿಗಳ ಮೇಲೆ ದಾಳಿ ನಡೆಸುವುದಲ್ಲದೇ ದೇಶದ ಪ್ರಮುಖ ರಾಜಕಾರಣಿಗಳನ್ನು ಅಪಹರಿಸಿ ಜೈಲಿನಲ್ಲಿರುವ ಉಗ್ರರನ್ನು ಬಿಡುಗಡೆಗೊಳಿಸುವಂತೆ ಒತ್ತಡ ಹೇರುವ ತಂತ್ರವನ್ನು ಉಗ್ರರು ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|