ಪಾಕಿಸ್ತಾನ ಅಫಘಾನಿಸ್ಥಾನ ಗಡಿಭಾಗದಲ್ಲಿರುವ ಬುಡಕಟ್ಟು ಪ್ರದೇಶದಲ್ಲಿ ಉಗ್ರರು ಮತ್ತು ಸೇನಾಪಡೆಗಳ ಮಧ್ಯೆ ನಡೆದ ಘರ್ಷಣೆಯಲ್ಲಿ 15 ಉಗ್ರರು ಸಾವನ್ನಪ್ಪಿದ್ದು 6 ಸೈನಿಕರು ಹತರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಉತ್ತರ ವಜೀರಿಸ್ತಾನದಲ್ಲಿರುವ ಮಿರಾನ್‌ಶಾಹ್ ಪ್ರದೇಶದಲ್ಲಿರುವ ಉಗ್ರರ ಅಡಗುತಾಣದ ಮೇಲೆ ಸೇನಾಪಡೆಗಳು ದಾಳಿ ನಡೆಸಿದಾಗ 6 ಸೈನಿಕರು ಮೃತರಾಗಿದ್ದು,20 ಮಂದಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಸೇನಾ ವಕ್ತಾರ ವಹೀದ್ ರಷೀದ್ ತಿಳಿಸಿದ್ದಾರೆ.
ಘರ್ಷಣೆಯಲ್ಲಿ 15 ಮಂದಿ ಉಗ್ರರು ಸಾವನ್ನಪ್ಪಿದ್ದು ಪರಾರಿಯಾದವರಿಗಾಗಿ ಸೇನೆ ಉಗ್ರಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಹೀದ್ ಹೇಳಿದ್ದಾರೆ.
ಸೇನಾ ಕಾರ್ಯಾಚರಣೆಯ ನಂತರ ಸೈನಿಕರು ಸಾಗುತ್ತಿರುವ ಮಾರ್ಗದಲ್ಲಿ ಉಗ್ರರು ರಸ್ತೆ ಬದಿಯಲ್ಲಿ ಹುದಗಿಸಿಡಲಾಗಿದ್ದ ಬಾಂಬ್‌ನ್ನು ರೀಮೋಟ್ ಮೂಲಕ ಸಿಡಿಸಿದ್ದರಿಂದ ಆರು ಸೈನಿಕರು ಗಾಯಗೊಂಡಿದ್ದಾರೆ ಎಂದು ವಕ್ತಾರ ವಹೀದ್ ರಷೀದ್ ತಿಳಿಸಿದ್ದಾರೆ.
|