ದೇಶದಲ್ಲಿ ಜಾರಿಗೊಳಿಸಲಾದ ತುರ್ತುಪರಿಸ್ಥಿತಿಯನ್ನು ಹಿಂತೆಗೆಯುವ ಮುನ್ನ ನ್ಯಾಯಾಧೀಶರಿಗೆ ಕಡಿವಾಣಹಾಕಲು ರಾಷ್ಟ್ರಾಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಲಾಗುವುದು ಎಂದು ಸರಕಾರದ ವಕ್ತಾರ ಮಲಿಕ್ ಖಯ್ಯುಮ್ ತಿಳಿಸಿದ್ದಾರೆ. ತುರ್ತುಪರಿಸ್ಥಿತಿಯನ್ನು ಹಿಂತೆಗೆಯುವ ಕುರಿತಂತೆ ನಾಳೆ ಇತ್ಯರ್ಥಗೊಳಿಸಲಾಗುತ್ತಿದ್ದು ಶನಿವಾರದಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಮುಷರಫ್ ಅವರನ್ನು ಭೇಟಿ ಮಾಡಿದ ನಂತರ ಖಯ್ಯುಮ್ ತಿಳಿಸಿದ್ದಾರೆ.
ನವೆಂಬರ 3 ರಂದು ತುರ್ತುಪರಿಸ್ಥಿತಿಯಲ್ಲಿ ಜಾರಿಗೊಳಿಸಲಾದ ಮೂಲಭೂತ ಹಕ್ಕುಗಳು ಹಾಗೂ ಪತ್ರಿಕಾ ಸ್ವಾತಂತ್ರ ಮತ್ತು ತುರ್ತುಪರಿಸ್ಥಿತಿಯನ್ನು ವಿರೋಧಿಸಿದ ನ್ಯಾಯಾಧೀಶರ ಅಮಾನತುಗಳನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಉದ್ದೇಶಿಸಲಾದ ಸಂವಿಧಾನ ತಿದ್ದುಪಡಿಯಿಂದಾಗಿ ರಾಷ್ಟ್ರಾಧ್ಯಕ್ಷರು ಸರ್ವೋಚ್ಚ ನ್ಯಾಯಾಲಯದ ಸಮಿತಿಯ ಆದೇಶವಿಲ್ಲದೇ ನ್ಯಾಯಾಧೀಶರನ್ನು ರಜೆಯ ಮೇಲೆ ಕಳುಹಿಸಬಹುದಾಗಿದೆ. ಇನ್ನಿತರ ತಿದ್ದುಪಡಿಗಳ ಬಗ್ಗೆ ಮುಷರಫ್ ಕಾನೂನು ಸಲಹೆಗಾರರೊಂದಿಗೆ ಚರ್ಚೆ ನಡೆಸುತ್ತಿದ್ದು, ತುರ್ತುಪರಿಸ್ಥಿತಿಯನ್ನು ಹಿಂತೆಗೆಯುವ ಮುನ್ನ ಜಾರಿಗೊಳಿಸಲಾಗುವುದು ಎಂದು ಮಲಿಕ್ ಖಯ್ಯುಮ್ ತಿಳಿಸಿದ್ದಾರೆ.
|