ದೇಶದ ಉತ್ತರ ಭಾಗದಲ್ಲಿರುವ ಕಿಲಾಲಿ ಪ್ರದೇಶದಲ್ಲಿ ಸೇನಾಪಡೆಗಳ ಮತ್ತು ತಮಿಳು ಉಗ್ರರ ನಡುವೆ ನಡೆದ ಘರ್ಷಣೆಯಲ್ಲಿ 18 ಉಗ್ರರು ಸಾವನ್ನಪ್ಪಿದ್ದಾರೆ.
ಐಸ್‌ಕ್ರೀಮ್ ಮಾರಾಟಗಾರರ ವೇಷದಲ್ಲಿ ಉಗ್ರರು ಸ್ಪೋಟಕಗಳನ್ನು ಸಿಡಿಸುವ ಸಾಧ್ಯತೆಗಳಿರುವುದರಿಂದ ಜನತೆ ಎಚ್ಚರದಿಂದಿರಬೇಕು ಎಂದು ಸೇನೆ ಎಚ್ಚರಿಸಿದೆ.
ತಮಿಳು ಉಗ್ರರು ನೂತನ ತಂತ್ರಗಳಿಂದ ದಾಳಿ ನಡೆಸಲು ಸಿದ್ದತೆ ನಡೆಸಿದ್ದು, ಐಸ್‌ಕ್ರೀಮ ಮಾರಾಟಗಾರರ ವೇಷದಲ್ಲಿ ಸ್ಪೋಟಕಗಳನ್ನು ಸಾಗಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಸೇನಾಪಡೆಗಳ ವಕ್ತಾರ ಉದಯ ನನಯಕ್ಕರಾ ತಿಳಿಸಿದ್ದಾರೆ.
ಸ್ಪೋಟಕಗಳುಳ್ಳ ಐಸ್‌ಕ್ರೀಮ್ ಪೆಟ್ಟಿಗೆಗಳನ್ನು ಸೈಕಲ್‌ಗೆ ಜೋಡಿಸಿ ಶಸ್ತ್ರಾಸ್ತ್ರಗಳ ಕಳ್ಳಸಾಗಾಣೆ ಮಾಡಲು ಉದ್ದೇಶಿಸಿದ್ದಾರೆ ಎಂದು ಗುಪ್ತಚರ ದಳಗಳು ತಿಳಿಸಿವೆ.
ಆಗ್ನೆಯ ಭಾಗದಲ್ಲಿರುವ ವಾಯುನಿಯಾ ಪ್ರದೇಶದಲ್ಲಿರುವ ಉಗ್ರರ ವಿರುದ್ದದ ಕಾರ್ಯಾಚರಣೆಗೆ ಸೇನಾಪಡೆಗಳು ಭಾರಿ ಪ್ರಮಾಣದ ಸಿದ್ದತೆ ನಡೆಸುತ್ತಿದೆ.
|