ಲೆಬನಾನ್ ಉಗ್ರರಾದ ಹೆಜ್ಬುಲ್ಲಾ ಹಾಗೂ ಶ್ರೀಲಂಕಾದ ತಮಿಳು ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದೆ ಎನ್ನುವ ವರದಿಗಳ ಆಧಾರದ ಮೇಲೆ ಭಯೋತ್ಪಾದಕ ಪಟ್ಟಿಯಿಂದ ಕೈಬಿಡುವುದನ್ನು ಅಮೆರಿಕ ಹಿಂತೆಗೆದುಕೊಂಡಿದೆ
ಅಮೆರಿಕ ಗುರುತಿಸಿದ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿಯನ್ನು ನೀಡಿದ್ದಲ್ಲದೇ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉಗ್ರರ ಸಂಘಟನೆಗಳಿಗೆ ಸರಬರಾಜು ಮಾಡಿದೆ ಎಂದು ಸಿಎರ್‌ಎಸ್ ವರದಿ ನೀಡಿದೆ.
ಅಮೆರಿಕದೊಂದಿಗೆ ನಡೆದ ಒಪ್ಪಂದದಂತೆ ಉತ್ತರಕೊರಿಯಾ ಪರಮಾಣು ಕಾರ್ಯಕ್ರಮಗಳನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಭಯೋತ್ಪಾದಕ ದೇಶಗಳಿಗೆ ಪ್ರಚೋದನೆ ಪಟ್ಟಿಯಿಂದ ಕೈಬಿಡಲು ಅಮೆರಿಕ ನಿರ್ಧರಿಸಿತ್ತು.
2006ರಲ್ಲಿ ಪರಮಾಣು ಪರೀಕ್ಷೆಯನ್ನು ನಡೆಸಿದ ಉತ್ತರ ಕೊರಿಯಾ ಸಂಪೂರ್ಣ ಮತ್ತು ನಿಖರ ವರದಿಯನ್ನು ಪ್ರಸಕ್ತ ವರ್ಷದ ಅಂತ್ಯದವೇಳೆಗೆ ಅಮೆರಿಕೆಗೆ ಸಲ್ಲಿಸುವುದಾಗಿ ಹೇಳಿರುವುದು ಪೂರ್ಣಗೊಳಿಸುವಲ್ಲಿ ಅನುಮಾನ ಮೂಡಿಸಿದೆ ಎಂದು ಅಮೆರಿಕ ಹೇಳಿದೆ.
|