ಭೀಕರ ಚಂಡುಮಾರುತದ ಉಲ್ಬಣಿಸಿದ ಪ್ರವಾಹದಿಂದಾಗಿ ದೇಶದಾದ್ಯಂತ 12 ಮಂದಿ ಸಾವನ್ನಪ್ಪಿದ್ದು, 20 ಸಾವಿರ ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ
ಮಲೇಷಿಯಾದ ಜೋಹೋರ್ ಹಾಗೂ ಪಹಾಂಗ್ ರಾಜ್ಯದಲ್ಲಿ ಹೆಚ್ಚಿನ ಚಂಡುಮಾರುತಕ್ಕೆ ಸಿಲುಕಿದ್ದು ಸುಮಾರು 23ಸಾವಿರ ಮಂದಿ ಮನೆಗಳನ್ನು ಕಳೆದುಕೊಂಡಿದ್ದು ತಾತ್ಕಾಲಿಕ ನಿರಾಶ್ರಿತರ ಶಿಬಿರಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲೇಷಿಯಾದ ಪೂರ್ವಿಯ ರಾಜ್ಯಗಳಾದ ಟೆರೆನ್ ಹಾಗೂ ಕೆಲಾಂಟನ್ ರಾಜ್ಯಗಳು ಚಂಡುಮಾರುತದ ಉಲ್ಬಣಿಸಿದ ಪ್ರವಾಹದಿಂದಾಗಿ ತತ್ತರಿಸಿ ಹೋಗಿದ್ದು ಜನಜೀವನ ಆತಂಕದ ಸ್ಥಿತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಚಂಡುಮಾರುತದಿಂದಾಗಿ ಉಲ್ಬಣಿಸಿದ ಪ್ರವಾಹ ನಿರಂತರ ಹೆಚ್ಚಾಗುತ್ತಿದ್ದು, ರಕ್ಷಣೆಗಾಗಿ ಜನತೆ ತಾತ್ಕಾಲಿಕ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ, ಅಹಾರ ಮತ್ತು ಅಗತ್ಯ ವಸ್ತುಗಳ ಸರಬರಾಜಿಗೆ ಸರಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಇಲಾಖೆಗಳಿಗೆ ಆದೇಶಿಸಿದೆ ಎಂದು ದೇಶಿಯ ವಾಣಿಜ್ಯ ಸಚಿವ ಮೊಹಮ್ಮದ್ ಶಫೈ ಅಡಾಲ್ ತಿಳಿಸಿದ್ದಾರೆ..
|