ಮುಂಬರುವ ಜನೆವರಿಯಲ್ಲಿ ನಡೆಯುವ ಚುನಾವಣೆಯಲ್ಲಿ ಸಂಸತ್ ಚುನಾವಣೆಯ ನಂತರ ಕುದರೆ ವ್ಯಾಪಾರದಲ್ಲಿ ತೊಡಗುವುದಾಗಲಿ ಪಕ್ಷದ ಕಾರ್ಯಕರ್ತರನ್ನು ಕಡೆಗೆಣಿಸುವ ಕಾರ್ಯದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಕುರಾನ್ ಮೇಲೆ ಪ್ರಮಾಣ ಮಾಡುವಂತೆ ಭುಟ್ಟೋ ಪಕ್ಷದ ಸದಸ್ಯರಿಗೆ ಕರೆನೀಡಿದರು.
ಕುರಾನ್ ಮೇಲೆ ಪ್ರಮಾಣ ಮಾಡಿದವರಲ್ಲಿ ಇಬ್ಬರು ಸಂಸತ್ ಸದಸ್ಯರು ಹಾಗೂ ನೌಶೆರಾದ ಐದು ಪ್ರಾಂತೀಯ ಕ್ಷೇತ್ರದ ಅಭ್ಯರ್ಥಿಗಳು ಸೇರಿದ್ದಾರೆ. ಪೆಶಾವರ್ ಜಿಲ್ಲೆಯ ನಾಲ್ವರು ಅಭ್ಯರ್ಥಿಗಳು ಹಾಗೂ ನಾರ್ಥ್ ವೆಸ್ಟ್ ಫ್ರಂಟೈಯರ್ ಸಂಸದೀಯ ಕ್ಷೇತ್ರದ 11 ಅಭ್ಯರ್ಥಿಗಳು ಪ್ರಮಾಣ ಮಾಡಿದರು.
ಮರ್ದಾನ್ ಜಿಲ್ಲೆಯಲ್ಲಿ ಪಕ್ಷದ ಸದಸ್ಯರಿಗೆ ಕುರಾನ್ ಪ್ರಮಾಣವನ್ನು ಸ್ವೀಕರಿಸುವಂತೆ ಆದೇಶ ನೀಡಲಾಗಿದ್ದು ಪಾಕಿಸ್ತಾನ ಪೀಪಲ್ಸ್ ಪಕ್ಷದ ಅಭ್ಯರ್ಥಿಗಳು ಚುನಾವಣೆಯ ನಂತರ ಅಮಿಶಗಳಿಗೆ ಮಣಿಯಬಾರದು ಎನ್ನುವುದಕ್ಕಾಗಿ ಕುರಾನ್ ಪ್ರಮಾಣ ಕಡ್ಡಾಯವಾಗಿ ಮಾಡಲಾಗಿದೆ.
ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಂಸತ್ ಸದಸ್ಯರು ಸೆನೆಟ್ ಚುನಾವಣೆಯಲ್ಲಿ ಹಣಕ್ಕಾಗಿ ಮತವನ್ನು ನೀಡಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಪಕ್ಷದ ಸದಸ್ಯರಿಗೆ ಪ್ರಮಾಣ ವಚನ ಭೋದಿಸಲಾಗುತ್ತಿದೆ ಪಕ್ಷದ ಮೂಲಗಳು ತಿಳಿಸಿವೆ.
|