ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಲೇಷಿಯಾ:ಐವರು ಭಾರತೀಯರ ಬಂಧನ
ದೇಶದ ಭದ್ರತೆ ಕಾಯ್ದೆ ಅನ್ವಯ ಹಿಂದೂ ಸಂಘಟನೆಯ ಐವರು ಭಾರತೀಯರನ್ನು ಯಾವುದೇ ವಿಚಾರಣೆ ಇಲ್ಲದೇ ಅನಿರ್ಧಿಷ್ಟ ಕಾಲದವರೆಗೆ ಬಂಧಿಸಲಾಗಿದೆ ಎಂದು ವಕೀಲ ಸುರೇಂದ್ರನ್ ತಿಳಿಸಿದ್ದಾರೆ.

ಬಂಧಿತರು ಹಿಂದೂ ಸಂಘಟನೆಯ ಪ್ರಮುಖ ನಾಯಕರುಗಳಾಗಿದ್ದು, ನವೆಂಬರ್ 25 ರಂದು ನಡೆದ ನಿಷೇಧಿತ ಮೆರವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಅಪರೂಪಕ್ಕೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಬಂದಾಗ ಮಾತ್ರ ಉಪಯೋಗಿಸುವ ಅಂತರಿಕ ಭದ್ರತಾ ಕಾಯ್ದೆ (ಐಎಸ್‌ಎ) ಕಾನೂನಿನ ಅಡಿಯಲ್ಲಿ ಐವರು ಭಾರತೀಯರನ್ನು ಬಂಧಿಸಲಾಗಿದೆ ಎಂದು ಸುರೇಂದ್ರನ್ ಹೇಳಿದ್ದಾರೆ.

ಹಿಂದೂ ಸಂಘಟನೆಗಳು ಕಳೆದ ತಿಂಗಳು ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಾರತೀಯರು ಸರಕಾರದ ನಿದ್ದೆಗೆಡಿಸಿದ್ದರು.

ರಸ್ತೆ ಪ್ರತಿಭಟನೆಗಳು ಹಿಂಸಾಚಾರಕ್ಕೆ ಎಡೆಮಾಡಿಕೊಡುವುದರಿಂದ ಸರಕಾರ ಇದನ್ನು ಸಹಿಸಲು ಸಾಧ್ಯವಿಲ್ಲ. ಅಗತ್ಯ ಬಿದ್ದರೆ ಅಂತರಿಕ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ಅಬ್ದುಲ್ಲಾ ಅಹಮದ್ ಹೇಳಿದ್ದಾರೆ.
ಮತ್ತಷ್ಟು
ಪಿಪಿಪಿ ಪಕ್ಷದ ಸದಸ್ಯರಿಗೆ ಕುರಾನ್ ಪ್ರಮಾಣ
ಮಲೇಷಿಯಾ: ಚಂಡುಮಾರುತಕ್ಕೆ 12 ಬಲಿ
ಉ.ಕೊರಿಯಾದಿಂದ ಉಗ್ರರಿಗೆ ಶಸ್ತ್ರಾಸ್ತ್ರ ಸರಬರಾಜು:ಯುಎಸ್
ಐಸ್‌ಕ್ರಿಮ್ ವಿತರಕರ ವೇಷದಲ್ಲಿ ಉಗ್ರರು
ತುರ್ತುಸ್ಥಿತಿ ಹಿಂತೆಗೆತಕ್ಕೆ ಮುನ್ನ ಸಂವಿಧಾನ ತಿದ್ದುಪಡಿ
ಸೇನಾ ಕಾರ್ಯಾಚರಣೆ 15 ಉಗ್ರರ ಸಾವು