ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಎಸ್ಎಸ್ಆರ್ ಒಗ್ಗೂಡಿಕೆಗೆ ಪುಟಿನ್ ಮತ್ತೆ ಯತ್ನ
ಎರಡು ಸೋವಿಯತ್ ಒಕ್ಕೂಟ ರಾಷ್ಟ್ರಗಳಿಂದ ಬೇರೆಯಾಗಿರುವ ರಾಜ್ಯಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಬಲಾರಸ್‌ಗೆ ಭೇಟಿ ನೀಡಲಿದ್ದಾರೆ.

ಮುಂದಿನ ವರ್ಷ ಅವರು ಅಧ್ಯಕ್ಷ ಗಾದಿಯಿಂದ ಕೆಳಗಿಳಿಯುವುದರಿಂದ ಪುಟಿನ್ ಅವರು ಮಾತುಕತೆಗೆ ಮುಂದಾಗಿದ್ದಾರೆ.

'ಬಲಾರಸ್‌ನೊಂದಿಗೆ ಕೈಜೋಡಿಸಿ ಒಕ್ಕೂಟ ರಾಷ್ಟ್ರ ನಿರ್ಮಿಸಲು ಪ್ರಯತ್ನಿಸಿ, ಆ ಒಕ್ಕೂಟದ ಅಧ್ಯಕ್ಷರಾಗಿ ಪುಟಿನ್ ಆಯ್ಕೆಯಾದರೂ, ಅದಕ್ಕೆ ತಾವು ಆಶ್ಚರ್ಯಗೊಳ್ಳುವುದಿಲ್ಲ' ಎಂದು ರಷ್ಯಾದ ಕಮ್ಯೂನಿಸ್ಟ್ ಪಕ್ಷದ ಮುಖ್ಯಸ್ಥ ಗೆನಡಿ ಜುಗನೋವ್ ಹೇಳಿದ್ದಾರೆ.

ರಷ್ಯಾದ ಮುಂದಿನ ಅಧ್ಯಕ್ಷರಾಗುವುದಕ್ಕೆ ಈಗಿನ ಉಪಪ್ರಧಾನಿಯಾಗಿರುವ ಡ್ಮರ್ಟಿ ಮೆಡ್ವೆಡೇವ್ ಅವರಿಗೆ ಬೆಂಬಲ ನೀಡಿದ್ದೇನೆ. ಅವರು ಖಂಡಿತ ಗೆಲುವು ಸಾಧಿಸಲಿದ್ದಾರೆ ಎಂದು ಪುಟಿನ್ ಸೋಮವಾರವಷ್ಟೇ ಹೇಳಿದ್ದರು.

ತಾವು ಪ್ರಧಾನಿಯಾಗಿರಲು ಇಚ್ಛಿಸುತ್ತೇನೆ. ಆದರೆ, ಪುಟಿನ್ ಅವರು ತಮ್ಮ ಬೇಡಿಕೆಯನ್ನು ಸ್ವೀಕರಿಸಲಿಲ್ಲ ಎಂದು ಮೆಡ್ವೆಡೇವ್ ಹೇಳಿಕೆ ನೀಡಿದ್ದರು.

1991 ರಲ್ಲಿ ಬೇರ್ಪಡೆಗೊಂಡ ರಷ್ಯಾ ಹಾಗೂ ಯುಎಸ್ಎಸ್ಆರ್‌ಗಳು ಮತ್ತೊಮ್ಮೆ ಒಗ್ಗೂಡಿಸುವುದು ತಮ್ಮ ಪ್ರಯತ್ನವಾಗಿದ್ದು, ಈ ಕಾರ್ಯವು ಸಫಲವಾಗಿದ್ದಲ್ಲಿ ರಷ್ಯಾದ ಸಾಕಷ್ಟು ಜನರು ಹೆಮ್ಮೆ ಪಡುತ್ತಾರೆ ಎಂದು ಪುಟಿನ್ ಹೇಳಿದ್ದಾರೆ.
ಮತ್ತಷ್ಟು
ಮಲೇಷಿಯಾ:ಐವರು ಭಾರತೀಯರ ಬಂಧನ
ಪಿಪಿಪಿ ಪಕ್ಷದ ಸದಸ್ಯರಿಗೆ ಕುರಾನ್ ಪ್ರಮಾಣ
ಮಲೇಷಿಯಾ: ಚಂಡುಮಾರುತಕ್ಕೆ 12 ಬಲಿ
ಉ.ಕೊರಿಯಾದಿಂದ ಉಗ್ರರಿಗೆ ಶಸ್ತ್ರಾಸ್ತ್ರ ಸರಬರಾಜು:ಯುಎಸ್
ಐಸ್‌ಕ್ರಿಮ್ ವಿತರಕರ ವೇಷದಲ್ಲಿ ಉಗ್ರರು
ತುರ್ತುಸ್ಥಿತಿ ಹಿಂತೆಗೆತಕ್ಕೆ ಮುನ್ನ ಸಂವಿಧಾನ ತಿದ್ದುಪಡಿ