ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇನೆ, ಉಗ್ರರ ಘರ್ಷಣೆ: 22 ಸಾವು
ಶ್ರೀಲಂಕಾದ ಉತ್ತರ ಭಾಗದಲ್ಲಿ ಸೇನಾಪಡೆಗಳ ಹಾಗೂ ತಮಿಳು ಉಗ್ರರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಸೈನಿಕರು ಸೇರಿದಂತೆ 22 ಮಂದಿ ಸಾವನ್ನಪ್ಪಿದ್ದಾರೆ.

ಜಾಫ್ನಾದ ಕಿಲ್ಲಾಲಿ, ನಗರಕೋವಿಲ್ ಮತ್ತು ಮುಹಾಮಲಿ ಪ್ರದೇಶಗಳಲ್ಲಿ ನಡೆದ ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ 13 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ.

ವಾಯುನಿಯಾದ ನೈಋತ್ಯ ಭಾಗದಲ್ಲಿರುವ ಪಲ್ಲೈಮೊಡೈ ಪ್ರದೇಶದಲ್ಲಿ ಉಗ್ರರ ವಿರುದ್ದ ನಡೆದ ಭಾರಿ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ತಮಿಳು ಉಗ್ರರು ಸ್ಪೋಟಗಳನ್ನು ಸರಬರಾಜು ಮಾಡಲು ಹೊಸ ತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಸೇನಾ ವಕ್ತಾರ ಉದಯಾ ನನಯಕ್ಕರಾ ತಿಳಿಸಿದ್ದಾರೆ.

ತಮಿಳು ಉಗ್ರರು ಸ್ಪೋಟಕಗಳನ್ನು ಐಸ್‌ಕ್ರಿಮ್ ಪೆಟ್ಟಿಗೆಯಲ್ಲಿ ಅಡಗಿಸಿ ಸೈಕಲ್‌ಗಳಿಗೆ ಜೋಡಿಸಿ ಕಳ್ಳಸಾಗಾಣೆ ಮಾಡುತ್ತಿದ್ದಾರೆ ಗುಪ್ತಚರದಳಗಳು ಸೇನೆಗೆ ಮಾಹಿತಿ ನೀಡಿವೆ ಎಂದು ಉದಯ ಹೇಳಿದ್ದಾರೆ.
ಮತ್ತಷ್ಟು
ಕೆರೆಬಿಯನ್: ಒಲ್ಗಾ ಚಂಡುಮಾರುತಕ್ಕೆ 10 ಸಾವು
ಯುಎಸ್ಎಸ್ಆರ್ ಒಗ್ಗೂಡಿಕೆಗೆ ಪುಟಿನ್ ಮತ್ತೆ ಯತ್ನ
ಮಲೇಷಿಯಾ:ಐವರು ಭಾರತೀಯರ ಬಂಧನ
ಪಿಪಿಪಿ ಪಕ್ಷದ ಸದಸ್ಯರಿಗೆ ಕುರಾನ್ ಪ್ರಮಾಣ
ಮಲೇಷಿಯಾ: ಚಂಡುಮಾರುತಕ್ಕೆ 12 ಬಲಿ
ಉ.ಕೊರಿಯಾದಿಂದ ಉಗ್ರರಿಗೆ ಶಸ್ತ್ರಾಸ್ತ್ರ ಸರಬರಾಜು:ಯುಎಸ್