ಪಾಕಿಸ್ತಾನದಲ್ಲಿರುವ ಅಣುಸ್ಥಾವರಗಳ ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥರಾಗಿ ರಾಷ್ಟ್ರಧ್ಯಕ್ಷ ಪರ್ವೇಜ್ ಅಧಿಕಾರ ಸ್ವೀಕರಿಸಿದ್ದಾರೆ.
2000ನೇ ವರ್ಷದಲ್ಲಿ ಸ್ಥಾಪಿಸಲಾದ ಅಣುಸ್ಥಾವರಗಳಿಗೆ ಹೆಚ್ಚಿನ ಭಧ್ರತೆ ಹಾಗೂ ಉಗ್ರರಿಂದ ರಕ್ಷಣೆ ನೀಡಲು ಸೂಕ್ತ ಕ್ರಮಗಳನ್ನು ತೆಗದುಕೊಳ್ಳುವಂತೆ ಆದೇಶಿಸಿಲಾಗಿದ್ದು ರಾಷ್ಟ್ರಾಧ್ಯಕ್ಷರು ಮುಖ್ಯಸ್ಥರಾಗಿದ್ದು, ಪ್ರಧಾನಿ ಉಪ ಮುಖ್ಯಸ್ಥರಾಗಿರುತ್ತಾರೆ ಎಂದು ಸರಕಾರ ಆದೇಶ ಹೊರಡಿಸಿದೆ.
ಅಣು ಕೇಂದ್ರಗಳ ಉಪಯೋಗ, ಬಾಹ್ಯಾಕಾಶ ತಂತ್ರಜ್ಞಾನಗಳ ಸಂಶೋಧನೆ , ಉತ್ಪಾದನೆ, ಹಾಗೂ ಅಭಿವೃದ್ಧಿಗಳ ಮೇಲೆ ಪ್ರಾಧಿಕಾರಕ್ಕೆ ಸಂಪೂರ್ಣ ಅಧಿಕಾರ ಹೊಂದಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪರಮಾಣು ಮತ್ತು ಬಾಹ್ಯಾಕಾಶ ವಿಷಯಗಳಿಗೆ ಸಂಬಂಧಿಸಿದಂತೆ ಸುರಕ್ಷೆ ಹಾಗೂ ಭದ್ರತೆ ಒದಗಿಸುವಲ್ಲಿ ಕಠಿಣ ನಿಲುವುಗಳನ್ನು ವಿವರಿಸಿ ಆದೇಶದಲ್ಲಿ ಹೊರಡಿಸಲಾಗಿದೆ
|