ನವೆಂಬರ್ 3 ರಂದು ತುರ್ತುಸ್ಥಿತಿ ಹೇರಿದ ನಿರ್ಧಾರಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎನ್ನುವ ಸಂವಿಧಾನದ ತಿದ್ದುಪಡಿ ಮಾಡಿ ಡಿಸೆಂಬರ್ 15 ರಂದು ತುರ್ತುಸ್ಥಿತಿ ಅಂತ್ಯಗೊಳಿಸುವ ಆದೇಶವನ್ನು ನೀಡಿದ್ದಾರೆ.
ಶನಿವಾರದಂದು ತುರ್ತುಸ್ಥಿತಿ ಅಂತ್ಯಗೊಳ್ಳಲಿದ್ದು, ಮುಷರಫ್ ಇಲ್ಲಿಯವರೆಗೆ ತೆಗೆದುಕೊಂಡ ನಿರ್ಧಾರಗಳಿಗೆ ರಕ್ಷಣೆ ನೀಡಲು ಸಂವಿಧಾನದ ತಿದ್ದುಪಡಿ ಮಾಡಲಾಗಿದ್ದು, ಸಂವಿಧಾನ ತಿದ್ದುಪಡಿಯಿಂದ ನ್ಯಾಯಾಂಗಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಸರಕಾರಿ ವಕ್ತಾರ ಅಟಾರ್ನಿ ಜನರಲ್ ಮಲಿಕ್ ಖಯ್ಯುಮ್ ಹೇಳಿದ್ದಾರೆ.
ಮೂರನೇಯ ಅವಧಿಗೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಸ್ಪರ್ಧಿಸದಿರಲು ನೀಡಿರುವ ತಡೆಯಾಜ್ಞೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಕುರಿತಂತೆ ಇಲ್ಲಿಯವರೆಗೆ ರಾಷ್ಟ್ರಾಧ್ಯಕ್ಷರು ಕಾನೂನು ಸಲಹೆಗಾರರೊಂದಿಗೆ ಚರ್ಚೆ ನಡೆಸಿಲ್ಲ ಎಂದು ಖಯ್ಯುಮ್ ಹೇಳಿದ್ದಾರೆ.
ಸೇನಾಸಮವಸ್ತ್ರವನ್ನು ಕಳಚಿದ ನಂತರ ನವೆಂಬರ್ 29ರಂದು ಎರಡನೇ ಅವಧಿಗೆ ಆಯ್ಕೆಯಾದ ಮುಷರಫ್ ಡಿಸೆಂಬರ್‌ನಲ್ಲಿ ತುರ್ತುಸ್ಥಿತಿಯನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಹೇಳಿರುವುದನ್ನು ಸ್ಮರಿಸಬಹುದು.
|