ಪಾಕ್ ಬುಡಕಟ್ಟು ಪ್ರದೇಶದಲ್ಲಿರುವ ಹಾಗೂ ಸ್ವಾತ್ ಕಣಿವೆಯಲ್ಲಿರುವ ಉಗ್ರಗಾಮಿ ಸಂಘಟನೆಯ ಆತ್ಮಹತ್ಯಾ ದಳದ ಸದಸ್ಯರಿಂದ ಭಾರತ ಮತ್ತು ಅಮೆರಿಕ ರಾಯಭಾರಿ ಕಚೇರಿಗಳ ಮೇಲೆ ಆತ್ಮಹತ್ಯಾದಾಳಿ ನಡೆಯಬಹುದು ಎಂದು ಪಾಕ್ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.
ಉಗ್ರರು ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ ಹಾಗೂ ಮಾಜಿ ಪ್ರಧಾನಿ ಬೆನ್‌ಜಿರ್ ಭುಟ್ಟೋ ರಾಷ್ಟ್ರದ ಪ್ರಮುಖ ವ್ಯಕ್ತಿಗಳು ಮತ್ತು ಸೇನಾನೆಲೆಗಳ ಮೇಲೆ ದಾಳಿ ನಡೆಸಬಹುದು ಎಂದು ಬಹಿರಂಗಪಡಿಸಿವೆ.
ಉಗ್ರರ ಪಟ್ಟಿಯಲ್ಲಿ ಭಾರತ ಅಮೆರಿಕ ರಾಯಭಾರಿ ಕಚೇರಿಗಳು ಮತ್ತು ಅದರ ಶಾಖೆಗಳು ಮೊದಲ ಸ್ಥಾನದಲ್ಲಿದ್ದು, ಧಾರ್ಮಿಕ ಮತ್ತು ರಾಜಕೀಯ ವ್ಯಕ್ತಿಗಳನ್ನು ಅಪಹರಿಸಲು ಸಿದ್ದತೆ ನಡೆಸಿದ್ದಾರೆ ಎಂದು ಗುಪ್ತಚರದಳ ಕಾರ್ಯಾಚರಣೆ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಯಾಕೂಬ್ ತಿಳಿಸಿದ್ದಾರೆ.
ದೇಶದ ಪ್ರಮುಖ ರಾಜಕಾರಣಿಗಳು ಮತ್ತು ವಿದೇಶಿ ಸೇವಾ ಸಂಸ್ಥೆಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಉಗ್ರರು ಯೋಜಿಸಿದ್ದಾರೆ ಎಂದು ಗುಪ್ತಚರದಳ ಎಚ್ಚರಿಕೆಯ ಮಾಹಿತಿ ನೀಡಿದೆ.
|