ಅಫಘಾನಿಸ್ಥಾನ ಕ್ಲಿಷ್ಟ ಪರಿಸ್ಥಿತಿಯಲ್ಲಿದ್ದು ಸುಧಾರಣೆಯತ್ತ ಸಾಗುವ ಸೂಚನೆಗಳು ಲಭಿಸಿದ್ದರೂ ಶೀಘ್ರದಲ್ಲಿ ನ್ಯಾಟೋಪಡೆಗಳು ಅಫಘಾನಿಸ್ಥಾನದಿಂದ ಮರಳುವುದಿಲ್ಲ ಎಂದು ನ್ಯಾಟೋಪಡೆಗಳ ಪ್ರಧಾನ ಕಾರ್ಯದರ್ಶಿ ಜಾಪ್ ದೇ ಹೂಪ್ ತಿಳಿಸಿದ್ದಾರೆ.
ಅಫಘಾನಿಸ್ಥಾನ ಪುನರ್‌ನಿರ್ಮಾಣ ಹಾಗೂ ಅಭಿವೃದ್ಧಿಯತ್ತ ಸಾಗಿದರೂ ತಾಲಿಬಾನ್‌ಗಳು ರಸ್ತೆಬದಿಯಲ್ಲಿ ಬಾಂಬ್‌ಗಳನ್ನು ಹುದುಗಿಸುವ ಘಟನೆಗಳು ಸಂಪೂರ್ಣವಾಗಿ ನಿಲ್ಲಬೇಕಿದೆ ಎಂದು ಹೇಳಿದ್ದಾರೆ.
ನ್ಯಾಟೋಪಡೆಗಳು ಅಫಘಾನಿಸ್ಥಾನದಿಂದ ತವರಿಗೆ ಮರಳಲು ಇನ್ನು ಕೆಲ ಕಾಲ ನಿರೀಕ್ಷಿಸಬೇಕಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಜಾಪ್ ದೇ ಹೂಪ್ ತಿಳಿಸಿದ್ದಾರೆ.
|