ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಂತರಿಕ ಭದ್ರತೆ ಕಾಯ್ದೆ: ಮಲೇಷಿಯಾ ಸಮರ್ಥನೆ
ದೇಶದಲ್ಲಿರುವ ಜನಾಂಗೀಯ ಹಿಂದೂಗಳ ವರ್ತನೆ ವಿಶ್ವಾಸಘಾತುಕವಾಗಿದ್ದರಿಂದ ಆಂತರಿಕ ಭಧ್ರತೆ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ಪ್ರಧಾನಿ ಅಬ್ದುಲ್ಲಾ ಬದಾವೈ ತಿಳಿಸಿದ್ದಾರೆ.

ಜನಾಂಗೀಯ ನಿಂದನೆ ಹಾಗೂ ತಾರತಮ್ಯದ ಆರೋಪಗಳನ್ನು ಹಿಂದ್ರಫ್ ಸಂಘಟನೆಯ ಪದಾಧಿಕಾರಿಗಳು ಮಾಡಿರುವುದರಿಂದ ದೇಶದಲ್ಲಿ ಹಣಹೂಡಿಕೆದಾರರಿಗೆ ಹಾಗೂ ಪ್ರವಾಸಿಗಳಿಗೆ ಮಲೇಷಿಯಾದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದೆ ಎಂದು ಪ್ರಧಾನಿ ಅಬ್ದುಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.

ಜನಾಂಗೀಯ ಹಿಂದೂಗಳ ವರ್ತನೆ ವಿಶ್ವಾಸಘಾತುಕವಾಗಿದ್ದು ದೇಶದ ಹಿತಾಸಕ್ತಿಗೆ ಧಕ್ಕೆ ತರುವುದಾಗಿದ್ದರಿಂದ ಆಂತರಿಕ ಭಧ್ರತೆ ಕಾಯ್ದೆಗೆ ನಾನು ಹಸ್ತಾಕ್ಷರ ಮಾಡಿದ್ದೆನೆ.ಇದಕ್ಕಿಂತ ಹೆಚ್ಚಿಗೆ ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ನಾನು ವಾಕ್‌ಸ್ವಾತಂತ್ರದ ಬೆಲೆಯನ್ನು ಅರಿತಿದ್ದೇನೆ. ಆದರೆ ದೇಶದ ಶಾಂತಿ ಮತ್ತು ಭದ್ರತೆಗೆ ಕಾನೂನು ಸುವ್ಯವಸ್ಥೆಗೆ ಮೊದಲು ಆದ್ಯತೆ ಕಾಯ್ದಿರಿಸಬೇಕಾಗುತ್ತದೆ ಎಂದು ಪ್ರಧಾನಿ ಅಬ್ದುಲ್ಲಾ ಬದಾವೈ ತಿಳಿಸಿದ್ದಾರೆ.
ಮತ್ತಷ್ಟು
ನ್ಯಾಟೋ ಪಡೆಗಳ ವಾಪಸಾತಿ ಇಲ್ಲ
ವಿದೇಶಿ ರಾಯಭಾರಿ ಕಚೇರಿಗಳ ಮೇಲೆ ಉಗ್ರರ ದಾಳಿ?
ಪಾಕ್ ಜಗತ್ತಿನ ಅಪಾಯಕಾರಿ ದೇಶ- ಕ್ಲಿಂಟನ್
ತುರ್ತುಸ್ಥಿತಿ ಅಂತ್ಯಗೊಳಿಸಲು ಮುಷರಫ್ ಆದೇಶ
ಅಣುಘಟಕಗಳ ಮುಖ್ಯಸ್ಥರಾಗಿ ಮುಷರಫ್
ಸೇನೆ, ಉಗ್ರರ ಘರ್ಷಣೆ: 22 ಸಾವು