ದೇಶದ ಜಾಲಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೇಲೆ ತಾಲಿಬಾನ್ ಉಗ್ರರು ಸ್ಪೋಟಕ ದಾಳಿ ನಡೆಸಿದಾಗ ಒಬ್ಬನು ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಗುಪ್ತಚರದಳಗಳು ಭಾರತ ಮತ್ತು ಅಮೆರಿಕ ದೇಶಗಳ ರಾಯಭಾರಿ ಕಚೇರಿಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ಆಘಾತದ ವರದಿ ಮಾಡಿದ ಬೆನ್ನಲ್ಲೆ ದಾಳಿ ನಡೆದಿದೆ
ಉಗ್ರರ ಪಟ್ಟಿಯಲ್ಲಿ ಭಾರತ ಅಮೆರಿಕ ರಾಯಭಾರಿ ಕಚೇರಿಗಳು ಮತ್ತು ಅದರ ಶಾಖೆಗಳು ಮೊದಲ ಸ್ಥಾನದಲ್ಲಿದ್ದು, ಧಾರ್ಮಿಕ ಮತ್ತು ರಾಜಕೀಯ ವ್ಯಕ್ತಿಗಳನ್ನು ಅಪಹರಿಸಲು ಸಿದ್ದತೆ ನಡೆಸಿದ್ದಾರೆ ಎಂದು ಗುಪ್ತಚರದಳ ಕಾರ್ಯಾಚರಣೆ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಯಾಕೂಬ್ ತಿಳಿಸಿದ್ದಾರೆ.
ದೇಶದ ಪ್ರಮುಖ ರಾಜಕಾರಣಿಗಳು ಮತ್ತು ವಿದೇಶಿ ಸೇವಾ ಸಂಸ್ಥೆಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಉಗ್ರರು ಯೋಜಿಸಿದ್ದಾರೆ ಎಂದು ಗುಪ್ತಚರದಳ ಎಚ್ಚರಿಕೆಯ ಮಾಹಿತಿ ನೀಡಿದೆ.
ಉಗ್ರರು ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ ಹಾಗೂ ಮಾಜಿ ಪ್ರಧಾನಿ ಬೆನ್‌ಜಿರ್ ಭುಟ್ಟೋ ರಾಷ್ಟ್ರದ ಪ್ರಮುಖ ವ್ಯಕ್ತಿಗಳು ಮತ್ತು ಸೇನಾನೆಲೆಗಳ ಮೇಲೆ ದಾಳಿ ನಡೆಸಬಹುದು ಎಂದು ಬಹಿರಂಗಪಡಿಸಿವೆ.
|