ಏರ್ ಇಂಡಿಯಾ ಕನಿಷ್ಕ್ ವಿಮಾನ ಬಾಂಬ್ ಸ್ಫೋಟ ದುರಂತ ಕುರಿತು ಕಳೆದ 16 ತಿಂಗಳಿನಿಂದ ಸುದೀರ್ಘವಾಗಿ ಕೈಗೊಂಡ ವಿಚಾರಣೆಯು ಅಂತ್ಯಗೊಂಡಿದೆ.
ವಿಚಾರಣೆ ಸಂದರ್ಭದಲ್ಲಿ ಹಿಂಸೆಗೆ ತುತ್ತಾದವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, ಕೆನಡಾದ ಉನ್ನತ ಭದ್ರತಾ ಸಮಿತಿಯ ನಡುವೆ ಹೋರಾಟ ನಡೆಸುವಲ್ಲಿ ಹಾಗೂ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಚಾರಣಾ ಮಂಡಳಿಯು ವಿಫಲತೆ ಅನುಭವಿಸಿದೆ ಎಂದು ವರದಿಗಳು ತಿಳಿಸಿವೆ.
1985 ರಲ್ಲಿ ಏರ್ ಇಂಡಿಯಾಗೆ ಸೇರಿದ ಕನಿಷ್ಕ್ ವಿಮಾನವು ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ 329 ಮಂದಿ ಮೃತಪಟ್ಟಿದ್ದರು.
ಬಾಂಬ್ ಸ್ಫೋಟಗೊಳ್ಳುವ ಪೂರ್ವದಲ್ಲಿ ಈ ಕುರಿತಾದ ಎಚ್ಚರಿಕೆಯನ್ನು ಕಡೆಗಣಿಸಲಾಗಿತ್ತು ಹಾಗೂ ಇದರ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಲಾಗಿರಲಿಲ್ಲ ಎಂದು ಟೊರೊಂಟೊ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞರಿಂದ ಆಯುಕ್ತ ಜಾನ್ ಮೇಜರ್ ಅವರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಶುಕ್ರವಾರ ಒಟ್ಟಾವಾದಲ್ಲಿ ನಡೆದ ಸಾಕ್ಷಿಗಳ ಅಂತಿಮ ವಿಚಾರಣೆಯ ಸಂದರ್ಭದಲ್ಲಿ ತಿಳಿದುಬಂದಿದೆ.
ಸಾಕ್ಷಿಗಳ ವಿರುದ್ಧ ಸಂಗ್ರಹಿಸಿದ್ದ ಮಾಹಿತಿ ಹಾಗೂ ಭಯೋತ್ಪಾದನೆ ಪ್ರಕರಣದ ಬಗ್ಗೆ ಮಾಹಿತಿ ಹಾಗೂ ಕೆನಡಾ ಭದ್ರತಾ ಗುಪ್ತಚರ ಸೇವೆಯು ತೆಗೆದುಕೊಂಡ ಕ್ರಮಗಳು ಕುರಿತು ಪ್ರಧಾನಮಂತ್ರಿ ಸ್ಪಿಫನ್ ಹಾರ್ಪರ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಮಾರ್ಗರೇಟ್ ಬ್ಲಡ್‌ವರ್ಥ್ ಅವರಿಂದ ಮಾಹಿತಿ ಮೇಜರ್ ಅವರು ಪಡೆದುಕೊಂಡಿದ್ದಾರೆ.
|