ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನ: ತುರ್ತುಪರಿಸ್ಥಿತಿ ಹಿಂದಕ್ಕೆ
ನವೆಂಬರ್ 3 ರಂದು ಪಾಕಿಸ್ತಾನದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಮುಷರ್ರಫ್ ಅವರು ಶನಿವಾರ (ಡಿ.15) ಹಿಂದಕ್ಕೆ ಪಡೆದು ಆದೇಶ ಹೊರಡಿಸಿದ್ದಾರೆ.

ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ಪಡೆದ ನಂತರವೂ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯವರೆಗೂ ಮಾಧ್ಯಮದ ಮೇಲಿನ ನಿರ್ಬಂಧ ಹಾಗೂ ನ್ಯಾಯಾಧೀಶರು, ವಕೀಲರನ್ನು ಗೃಹಬಂಧನದಲ್ಲಿಯೇ ಇರಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಸಂವಿಧಾನಾತ್ಮಕ ಹಕ್ಕುಗಳು ಮರುಸ್ಥಾಪನೆಗೊಳ್ಳಲಿವೆ ಎಂದು ಸರಕಾರವು ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ಮುಷರ್ರಫ್ ಅವರು ಅಧಿಕಾರವನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳಲು ಹಾಗೂ ಜನವರಿ 8ರ ಚುನಾವಣೆಯಲ್ಲಿ ತಾವು ಬೆಂಬಲಿಸಿದ ಪಕ್ಷವನ್ನು ಅಧಿಕಾರಕ್ಕೆ ತರಲು ಯೋಜನೆ ರೂಪಿಸಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಮುಷರ್ರಫ್ ಅವರು ನವೆಂಬರ್ 3 ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ನಂತರ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರವಾಗಿತ್ತು. ಜೊತೆಗೆ ಅಲ್ಲಿನ ಸಂವಿಧಾನವನ್ನು ರದ್ದು ಮಾಡಿ ಹಾಗೂ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಕೂಡ ಅಮಾನತು ಮಾಡಿದರು. ಈ ಮೂಲಕ ತಾವು ಅಧ್ಯಕ್ಷ ಸ್ಥಾನಕ್ಕೆ ಅರ್ಹರು ಎಂಬುವುದನ್ನು ಸಾಬೀತುಪಡಿಸಿಕೊಂಡಿದ್ದರು.

ತುರ್ತು ಪರಿಸ್ಥಿತಿ ಹೇರಿಕೆಯಿಂದ ಮೈತ್ರಿ ರಾಷ್ಟ್ರ ಅಮೆರಿಕ ಒಳಗೊಂಡಂತೆ ಇತರ ಅಂತಾರಾಷ್ಟ್ರೀಯ ಸಮುದಾಯ ಟೀಕೆಗೆ ಪಾಕಿಸ್ತಾನವು ಒಳಗಾಗಿತ್ತು. ಆದರೆ, ಇದನ್ನು ಸಮರ್ಥಿಸಿಕೊಂಡ ಮುಷರ್ರಫ್, ದೇಶದಲ್ಲಿರುವ ಇಸ್ಲಾಮಿಕ್ ತೀವ್ರವಾದಿಗಳು ಹಿಂಸೆಯನ್ನು ಹತ್ತಿಕ್ಕಲು ಈ ಕ್ರಮ ಜರುಗಿಸಲಾಗಿದೆ ಎಂದಿದ್ದರು.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಒಳಗೊಂಡಂತೆ ಇತರ ವಕೀಲರು, ನ್ಯಾಯಾಧೀಶರನ್ನು ಈಗಲೂ ಗೃಹ ಬಂಧನದಲ್ಲಿರಿಸಲಾಗಿದೆ. ಚುನಾವಣೆಯ ಕುರಿತು ವರದಿಗಳನ್ನು ಮಾಡದಂತೆ ಪಾಕಿಸ್ತಾನದ ಮಾಧ್ಯಮಗಳ ಮೇಲೆಯೂ ಕೂಡ ಬಹಿಷ್ಕಾರ ಹಾಕಲಾಗಿದೆ.
ಮತ್ತಷ್ಟು
ಪಾಕಿಸ್ತಾನ: ತುರ್ತು ಪರಿಸ್ಥಿತಿ ಹಿಂತೆಗೆತಕ್ಕೆ ಕ್ಷಣಗಣನೆ
ಕನಿಷ್ಕ ದುರಂತ: ವಿಚಾರಣೆ ಅಂತ್ಯ
ಪ್ರಿನ್ಸ್ ವಿಲಿಯಂ, ಹ್ಯಾರಿ: 2 ಗಂಟೆಗಳಲ್ಲಿ 12 ಲಕ್ಷ ವೆಚ್ಚ
ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ
ಆಂತರಿಕ ಭದ್ರತೆ ಕಾಯ್ದೆ: ಮಲೇಷಿಯಾ ಸಮರ್ಥನೆ
ನ್ಯಾಟೋ ಪಡೆಗಳ ವಾಪಸಾತಿ ಇಲ್ಲ