ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಲಿ: ಯುಎನ್ ನೀತಿಗೆ ಖಂಡನೆ
ಜಾಗತಿಕ ಉಷ್ಣ ಹವಾಮಾನ ಹೋರಾಟಕ್ಕೆ 2009 ರೊಳಗಾಗಿ ವಿಶ್ವ ಮಟ್ಟದ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳುವುದಕ್ಕೆ ಬಾಲಿಯಲ್ಲಿ ವಿಶ್ವಸಂಸ್ಥೆಯು ಕೈಗೊಂಡ ಒಪ್ಪಂದ ಕರಡಿಗೆ ಭಾರತ ಹಾಗೂ ಚೀನಾವು ತೀವ್ರ ತಕರಾರು ಎತ್ತಿವೆ.

ಜಾಗತಿಕ ಹವಾಮಾನ ಬದಲಾವಣೆಯ ನಿಟ್ಟಿನಲ್ಲಿ ಆರ್ಥಿಕ ಸಮೃದ್ಧ ರಾಷ್ಟ್ರಗಳು ತಮ್ಮ ಕಾರ್ಯನಿರ್ವಹಿಸಲಿ ಎಂದು ಭಾರತ ಹಾಗೂ ಚೀನಾಗಳು ಹೇಳಿವೆ.

ಜಾಗತಿಕ ಉಷ್ಣ ಹವಾಮಾನದ ವಿರುದ್ಧ ಹೋರಾಡಲು ಚಿಕ್ಕ ರಾಷ್ಟ್ರಗಳಿಗೆ ತಾಂತ್ರಿಕ ಹಾಗೂ ಹಣಕಾಸು ಸಹಾಯ ಪೂರೈಸುವಲ್ಲಿ ಶ್ರೀಮಂತ ರಾಷ್ಟ್ರಗಳ ಪಾತ್ರವನ್ನು ಹೆಚ್ಚಿಸುವುದಕ್ಕೆ ಕ್ರಮ ತೆಗೆದುಕೊಳ್ಳುವಂತೆ ಹೇಳಲಾಗಿರುವ ಕೊನೆಯ ಪಠ್ಯವನ್ನು ಬದಲಾವಣೆ ಮಾಡಬೇಕೆಂದು ಭಾರತವು ಬಾಲಿಯಲ್ಲಿ ಶುಕ್ರವಾರ ಮುಕ್ತಾಯವಾದ 190 ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಒತ್ತಾಯಿಸಿತು.

ಇದು ಸಂಪೂರ್ಣ ಸ್ವೀಕಾರ ಅರ್ಹವಾದುದಲ್ಲ ಎಂದು ಚೀನಾ ಪ್ರತಿನಿಧಿಗಳ ಸಭೆಯು ಹೇಳಿದ್ದು, ವಿಶ್ವಸಂಸ್ಥೆಯು ರೂಪಿಸಿರುವ ಕರಡಿನ ಬಗ್ಗೆ ಎದ್ದಿರುವ ವಿವಾದವನ್ನು ಬಗೆಹರಿಸುವವರೆಗೆ ಮಾತುಕತೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ಪಾಕಿಸ್ತಾನ: ತುರ್ತುಪರಿಸ್ಥಿತಿ ಹಿಂದಕ್ಕೆ
ಪಾಕಿಸ್ತಾನ: ತುರ್ತು ಪರಿಸ್ಥಿತಿ ಹಿಂತೆಗೆತಕ್ಕೆ ಕ್ಷಣಗಣನೆ
ಕನಿಷ್ಕ ದುರಂತ: ವಿಚಾರಣೆ ಅಂತ್ಯ
ಪ್ರಿನ್ಸ್ ವಿಲಿಯಂ, ಹ್ಯಾರಿ: 2 ಗಂಟೆಗಳಲ್ಲಿ 12 ಲಕ್ಷ ವೆಚ್ಚ
ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ
ಆಂತರಿಕ ಭದ್ರತೆ ಕಾಯ್ದೆ: ಮಲೇಷಿಯಾ ಸಮರ್ಥನೆ