ಪಾಕಿಸ್ತಾನದ ನೈಋತ್ಯ ಭಾಗದಲ್ಲಿರುವ ನೌಶೆರಾ ಪಟ್ಟಣದಲ್ಲಿ ಸೇನಾನೆಲೆಯ ದ್ವಾರದ ಹತ್ತಿರ ಆತ್ಮಹತ್ಯಾ ದಾಳಿ ನಡೆದ ಹಿನ್ನೆಲೆಯಲ್ಲಿ ಐವರು ಸಾವನ್ನಪ್ಪಿದ್ದು, ಹಲವಾರು ಜನ ಗಾಯಗೊಂಡಿದ್ದಾರೆ.
ನೌಶೆರಾದಲ್ಲಿರುವ ಸೇನಾ ಸರಬರಾಜು ಕೇಂದ್ರದ ಮುಖ್ಯದ್ವಾರದ ಬಳಿ ಆತ್ಯಹತ್ಯಾ ದಾಳಿ ನಡೆದು ಮೂವರು ನಾಗರಿಕರು ಹಾಗೂ ಇಬ್ಬರು ಸೇನಾ ಸಿಬ್ಬಂದಿ ಮೃತರಾಗಿದ್ದಾರೆ ಎಂದು ಸೇನಾ ವಕ್ತಾರ ಮೇಜರ್ ಜನರಲ್ ವಹೀದ್ ರಷೀದ್ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎಂದು ತಿಳಿಸಿದ ಅವರು ಪಾಕಿಸ್ತಾನ ಸೇನೆಯನ್ನು ಗುರಿಯಾಗಿಸಿಕೊಂಡು ಸ್ಪೋಟ ನಡೆಸಿರುವುದು ಹೊಸ ತಂತ್ರವಾಗಿದೆ ಎಂದರು.
ರಾಜಧಾನಿಯಲ್ಲಿರುವ ಲಾಲ್ ಮಸೀದಿಯ ಮೇಲೆ ಜುಲೈ ತಿಂಗಳಲ್ಲಿ ಸೇನಾಕಾರ್ಯಚರಣೆ ನಡೆಸಿ 100 ಉಗ್ರರು ಹತರಾದ ನಂತರ ಸೇನಾಪಡೆಗಳ ಮೇಲೆ ಉಗ್ರರು ದಾಳಿ ನಡೆಸುವುದು ಹೆಚ್ಚಾಗಿದೆ ಎಂದು ರಷೀದ್ ತಿಳಿಸಿದರು.
|