ಮಲೇಷ್ಯಾದಲ್ಲಿ ಭಾರತೀಯ ಸಂಘಟನೆಗಳ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ತನ್ನ ನೆಲದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಜನತೆಯ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಲೇಷ್ಯಾ ಪ್ರಧಾನಿ ಅಬ್ದುಲ್ಲಾ ಬದಾವಿ ಹೇಳಿದ್ದಾರೆ.
ಮಲೇಷಿಯನ್ ಹಿಂದೂ ಮಂಡಳಿ ಅಧ್ಯಕ್ಷ ಆರ್.ನಟರಾಜನ್ ಅವರ ನೇತೃತ್ವದಲ್ಲಿ 14ಸರಕಾರೇತರ ಸಂಸ್ಥೆಗಳ ನಾಯಕರ ನಿಯೋಗವೊಂದು ಪ್ರಧಾನಿ ಅವರನ್ನು ಭೇಟಿಯಾಗಿ ಚರ್ಚಿಸಿದ ವೇಳೆ ಬದಾವಿ ಅವರಿಂದ ಈ ಭರವಸೆ ವ್ಯಕ್ತಗೊಂಡಿದೆ.
ಸಭೆಯಲ್ಲಿ ಮಲೇಷಿಯನ್ ಮಾನವ ಹಕ್ಕುಗಳ ಆಯೋಗದ ಪ್ರತಿನಿಧಿಯಾಗಿ ಮಲೇಷಿಯನ್ ಇಂಡಿಯನ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಚಿವ ಸಾಮಿವೇಲು ಪಾಲ್ಗೊಂಡಿದ್ದರು.
ಎಲ್ಲಾ ವಿಚಾರಗಳ ಕುರಿತು ಗಮನಹರಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದು, ಬದಾವಿ ಅವರೊಂದಿಗಿನ ಮಾತುಕತೆ ತಮಗೆ ತೃಪ್ತಿ ತಂದಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂ ಹಕ್ಕುಗಳ ಕಾರ್ಯಪಡೆಗೆ ಸೇರಿದ ಐವರನ್ನು ಬಂಧಿಸುವ ನಿಟ್ಟಿನಲ್ಲಿ ವಿವಾದಿತ ಆಂತರಿಕ ರಕ್ಷಣಾ ಕಾಯ್ದೆಯನ್ನು ಸ್ಥಳೀಯಾಡಳಿತ ಜಾರಿಗೊಳಿಸಿದ ಒಂದು ದಿನದ ಬಳಿಕ ಭಾರತೀಯ ಸಂಘಟನೆ ಹಾಗೂ ಸರಕಾರ ನಡುವೆ ಮಾತುಕತೆ ನಡೆದಿದೆ.
|