ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಂಕಾ ದಾಳಿ: ಎಲ್ಟಿಟಿಇಯ ಪ್ರಭಾಕರನ್‌ಗೆ ಗಾಯ
ಶ್ರೀಲಂಕಾ ವಾಯುಪಡೆಯು ನವೆಂಬರ್ 28ರಂದು ನಡೆಸಿದ ವಾಯು ದಾಳಿಯಲ್ಲಿ ಎಲ್ಟಿಟಿಇ ಮುಖ್ಯಸ್ಥ ವೇಲುಪಿಳ್ಳೆ ಪ್ರಭಾಕರನ್ ಗಾಯಗೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಿಳಿನೋಚ್ಚಿ ಜಿಲ್ಲೆಯ ಉತ್ತರಭಾಗದಲ್ಲಿರುವ ಭೂಗತ ಬಂಕರ್ ಒಂದರೊಳಗೆ ಪ್ರಭಾಕರನ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದಿರುವ ವರದಿ, ಸರಕಾರಕ್ಕೆ ಈ ಘಟನೆಯ ಬಗ್ಗೆ ಅರಿವಿಲ್ಲ ಎಂದು ತಿಳಿಸಿದೆ.

ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ, ವಾನ್ನಿ ಪ್ರದೇಶದ ಅಜ್ಞಾನ ಸ್ಥಳವೊಂದರಲ್ಲಿ ಆತನಿಗೆ ಎಲ್ಟಿಟಿಇಯ ತಿಲೀಪನ್ ವೈದ್ಯಕೀಯ ಘಟಕವು ಚಿಕಿತ್ಸೆ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ "ನೇಷನ್" ಪತ್ರಿಕೆ ವರದಿ ಮಾಡಿದೆ.

ಬಂಕರಿನ ಭಾಗವೊಂದು ಕುಸಿದಿದ್ದು, ಅದು ಎಲ್ಟಿಟಿಇ ನಾಯಕನ ಮೇಲೆ ಬಿದ್ದ ಪರಿಣಾಮ ಆತ ಗಾಯಗೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಕಳೆದ ತಿಂಗಳು ಎಲ್ಟಿಟಿಇಯ ರಾಜಕೀಯ ವಿಭಾಗದ ಮುಖ್ಯಸ್ಥ ಎಸ್.ಪಿ.ತಮಿಳ್ ಸೆಲ್ವನ್ ಶ್ರೀಲಂಕಾ ವಾಯುದಾಳಿಯಿಂದ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪ್ರಭಾಕರನ್ ಗಾಯಗೊಂಡಿರುವ ವಿಷಯವನ್ನು ಎಲ್ಟಿಟಿಇ ಕೂಡ ಮುಚ್ಚಿಡುತ್ತಿದೆ. ಇದು ತಮ್ಮ ಪಡೆಗಳ ಮತ್ತು ಬೆಂಬಲಿಗರಲ್ಲಿ ಆಘಾತ ಮೂಡಿಸಿ, ಆತ್ಮವಿಶ್ವಾಸಕ್ಕೆ ಧಕ್ಕೆಯಾಗಬಹುದು ಎಂಬ ಆತಂಕವೇ ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ. ಎಲ್ಟಿಟಿಇಯಿಂದಾಗಲಿ, ಮಿಲಿಟರಿಯಿಂದಾಗಲಿ ಈ ವರದಿ ಬಗ್ಗೆ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಮತ್ತಷ್ಟು
ಭಾರತೀಯರ ಹಿತ ರಕ್ಷಣೆ: ಮಲೇಷ್ಯಾ ಪ್ರಧಾನಿ
ಆತ್ಮಹತ್ಯಾ ದಾಳಿ ಐವರ ಸಾವು
ಬಾಲಿ: ಯುಎನ್ ನೀತಿಗೆ ಖಂಡನೆ
ಪಾಕಿಸ್ತಾನ: ತುರ್ತುಪರಿಸ್ಥಿತಿ ಹಿಂದಕ್ಕೆ
ಪಾಕಿಸ್ತಾನ: ತುರ್ತು ಪರಿಸ್ಥಿತಿ ಹಿಂತೆಗೆತಕ್ಕೆ ಕ್ಷಣಗಣನೆ
ಕನಿಷ್ಕ ದುರಂತ: ವಿಚಾರಣೆ ಅಂತ್ಯ