ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫ್ರೆಂಚ್ ಪತ್ರಕರ್ತನ ಅಪಹರಣ
ಉತ್ತರ ಸೊಮಾಲಿಯಾದಲ್ಲಿ ಬಂದೂಕುಧಾರಿ ಅಪಹರಣಕರ್ತರು ಫ್ರೆಂಚ್ ಪತ್ರಕರ್ತನನ್ನು ಅಪಹರಿಸಿದ್ದು, 70 ಸಾವಿರ ಅಮೆರಿಕನ್ ಡಾಲರ್‌ಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ ಎಂದು ಪ್ರಾಂತ್ಯದ ಉಪರಾಜ್ಯಪಾಲ ಯೂಸುಫ್ ಮುಮಿನ್ ಹೇಳಿದ್ದಾರೆ.

ಫ್ರೆಂಚ್ ಅಧಿಕಾರಿಗಳು ಅಪಹರಣಕಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಪಹರಣಕಾರರ ಹಣದ ಬೇಡಿಕೆ ಕುರಿತಂತೆ ಪರಿಶೀಲಿಸಲಾಗುತ್ತಿದೆ ಎಂದು ಫ್ರೆಂಚ್ ವಿದೇಶಾಂಗ ಸಚಿವ ಬರ್ನರ್ಡ್ ಕೌಚನರ್ ತಿಳಿಸಿದ್ದಾರೆ.

ಅಪಹತನಾದ ಪತ್ರಕರ್ತ ಗ್ವೆನ್ ಲೇ ಛಾಯಾಗ್ರಾಹಕನಾಗಿದ್ದು,ಮಾನವ ಕಳ್ಳಸಾಗಾಣೆ ಕುರಿತಂತೆ ವರದಿ ಮಾಡಲು ತೆರಳಿದ್ದರಿಂದ ಅವರನ್ನು ಮಾನವ ಕಳ್ಳಸಾಗಾಣೆ ವೃತ್ತಿಯಲ್ಲಿರುವವರು ಅಪಹರಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಸೋಮಾಲಿಯಾದಲ್ಲಿ ಕಾನೂನಿನ ಭಯವಿಲ್ಲವಾದ್ದರಿಂದ, ಜಗತ್ತಿನಲ್ಲಿ ಅಪಾಯಕಾರಿ ದೇಶವಾಗಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ 8 ಮಂದಿ ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಪ್ಯಾರೀಸ್ ಮೂಲದ ಸಂಘಟನೆ ತಿಳಿಸಿದೆ.
ಮತ್ತಷ್ಟು
ಲಂಕಾ ದಾಳಿ: ಎಲ್ಟಿಟಿಇಯ ಪ್ರಭಾಕರನ್‌ಗೆ ಗಾಯ
ಭಾರತೀಯರ ಹಿತ ರಕ್ಷಣೆ: ಮಲೇಷ್ಯಾ ಪ್ರಧಾನಿ
ಆತ್ಮಹತ್ಯಾ ದಾಳಿ ಐವರ ಸಾವು
ಬಾಲಿ: ಯುಎನ್ ನೀತಿಗೆ ಖಂಡನೆ
ಪಾಕಿಸ್ತಾನ: ತುರ್ತುಪರಿಸ್ಥಿತಿ ಹಿಂದಕ್ಕೆ
ಪಾಕಿಸ್ತಾನ: ತುರ್ತು ಪರಿಸ್ಥಿತಿ ಹಿಂತೆಗೆತಕ್ಕೆ ಕ್ಷಣಗಣನೆ