ಸರಕಾರ ವಿರೋಧಿ ಮೆರವಣಿಗೆಯಲ್ಲಿ ತೊಡಗಿದ್ದ ಹಿಂದೂ ಹಕ್ಕುಗಳ ಸಂಘಟನೆಯ ಪ್ರತಿಭಟನಾಕಾರರ ವಿರುದ್ದ ದಾಖಲಿಸಲಾಗಿದ್ದ ಕೊಲೆ ಯತ್ನ ಪ್ರಕರಣವನ್ನು ಸರಕಾರ ರದ್ದುಗೊಳಿಸಿದೆ.
ಕಳೆದ ತಿಂಗಳು ಬಂಧಿಸಲಾಗಿದ್ದ ಬಂಧಿತರ ವಿರುದ್ದ ಕೊಲೆಯತ್ನ ಪ್ರಕರಣವನ್ನು ಸರಕಾರ ರದ್ದುಗೊಳಿಸಿದೆ ಎಂದು ಹೇಳಿದ ವಕೀಲ ಗನಿ 31 ಮಂದಿ ಪ್ರತಿಭಟನಾಕಾರರನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ ಎಂದರು.
26 ಮಂದಿ ಆರೋಪಿಗಳ ವಿರುದ್ದ ತಂಟೆಖೋರತನ ಹಾಗೂ ಕಾನೂನುಬಾಹಿರ್ ಕೃತ್ಯ ಎಸಗಿದ ಆರೋಪದ ಮೇಲೆ ತಪ್ಪಿತಸ್ತರೆಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಆರೋಪಿಗಳಿಗೆ ಜಾಮೀನು ನೀಡಲಾಗಿದ್ದು,ಡಿಸೆಂಬರ್ 27 ರಂದು ವಿಚಾರಣೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|