ಇರಾಕಿನಲ್ಲಿ ಅಮೆರಿಕವು ತನ್ನ ದಾಳಿಯ ವಿಫಲ ಯತ್ನವನ್ನು ಮರೆಯಾಗಿಸಿದೆ ಎಂದು ಅಲ್ ಖೈದಾದ ಎರಡನೇ ನಾಯಕ ಐಮನ್ ಅಲ್ ಜವಾಹ್ರಿ ನೂತನ ಬಿಡುಗಡೆಗೊಂಡಿರುವ ವಿಡಿಯೋದಲ್ಲಿ ಹೇಳಿದ್ದಾನೆ.
ಇದರಿಂದ ಇರಾಕಿನಲ್ಲಿ ಮುಜಾಹದ್ದೀನ್ ಪಡೆಗಳು ತಮ್ಮ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳಲಿವೆ ಎಂದು ಜವಾಹ್ರಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇರಾಕಿನಲ್ಲಿ ಅಮೆರಿಕದವರು ಮೂರು ಬಾರಿ ವಿಫಲತೆ ಅನುಭವಿಸಿದ್ದನ್ನು ನಾವು ನೋಡುತ್ತಿದ್ದೇವೆ ಎಂದು 90 ನಿಮಿಷಗಳ ವಿಡಿಯೋದಲ್ಲಿ ಹೇಳಿದ ಅಲ್ ಜವಾಹ್ರಿ, ಜನರನ್ನು ಮೋಸದ ಬಲೆಗೆ ಕೆಡವಲು ಅಮೆರಿಕದಲ್ಲಿ ಅವರು ಎಷ್ಟರ ಮಟ್ಟಿಗೆ ಬೃಹತ್ ಪ್ರಮಾಣದ ಪ್ರಚಾರ ಮಾಡಿದ್ದಾರೆ ಎಂಬುದು ಅರಿಯದ ವಿಚಾರ. ಆದರೆ, ಕುತಂತ್ರದ ಮುಂದೆ ನೈಜತೆ ಹಾಗೂ ಪ್ರಾಮಾಣಿಕತೆ ಎಂದಿಗೂ ಬಲಿಷ್ಠವೇ ಎಂದಿದ್ದಾರೆ.
ಅಮೆರಿಕ ಪಡೆಗಳು ಈಗಾಗಲೇ ಸೋಲನುಭವಿಸಿದ್ದು, ಅಲ್ಲಿಂದ ಕಾಲ್ತೆಗೆಯಲು ಎದುರು ನೋಡುತ್ತಿವೆ. ಆದರೆ, ಇರಾಕಿ ಪಡೆಗಳು ದೇಶದಲ್ಲಿ ಶಾಂತಿ ಕಾಪಾಡಿಕೊಳ್ಳಲು ಅಸಮರ್ಥವಾಗಿದೆ ಎಂದು ದೂಷಿಸಿದ ಜವಾಹ್ರಿ,
ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕದ ಪಡೆಗಳು ನಾಶವಾಗುತ್ತಾ ಹೊರಟಿದ್ದು, ಮುಜಾಹುದ್ದೀನ್ ಪಡೆಗಳು ತಮ್ಮ ಪ್ರಬಲತೆಯನ್ನು ಮೆರೆಯುತ್ತಿವೆ ಎಂದು ವರದಿಗಳಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು.
|