ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಕ್ತ ಚುನಾವಣೆ: ಮುಷರ್ರಫ್‌ಗೆ ರೈಸ್ ಒತ್ತಾಯ
ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳನ್ನು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಸಲು ಪಕ್ಷಗಳು ದೇಶದಲ್ಲಿ ಮುಕ್ತ ಪ್ರಚಾರಕ್ಕೆ ಅನುಮತಿ ನೀಡಬೇಕೆಂದು ಅಮೆರಿಕ ರಾಜ್ಯ ಕಾರ್ಯದರ್ಶಿ ಕಾಂಡೋಲಿಜಾ ರೈಸ್ ಮುಷರ್ರಫ್‌ರನ್ನು ಒತ್ತಾಯಿಸಿದ್ದಾರೆ.

ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಅನುಕೂಲಕರವಾದ ವಾತಾವರಣ ಒದಗಿಸುವಲ್ಲಿ ರಾಜಕೀಯ ಪ್ರಚಾರವು ಅತಿಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅಧ್ಯಕ್ಷರು ಅಲ್ಲಿನ ಪಕ್ಷಗಳಿಗೆ ಪ್ರಚಾರ ಹಾಗೂ ಬೃಹತ್ ಪ್ರಮಾಣದ ಸಮ್ಮೆಳನ ನಡೆಸಿಕೊಳ್ಳುವುದಕ್ಕೆ ಅನುಮತಿ ನೀಡಬೇಕೆಂದು ಅವರು ಒತ್ತಾಯಿಸಿದರು.

ಪ್ಯಾಲೇಸ್ತಾನಿಯ ವಂತಿಗೆ ಸಮ್ಮೆಳನದಲ್ಲಿ ಪಾಲ್ಗೊಳ್ಳುವುದಕ್ಕೆ ಪ್ಯಾರಿಸ್‌ಗೆ ತೆರಳುತ್ತಿದ್ದ ವಿಮಾನ ಮಾರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈಸ್, ವಿರೋಧ ಪಕ್ಷಗಳು ಜನರನ್ನು ಒಟ್ಟುಗೂಡಿಸಲು ಹಾಗೂ ರಾಲಿ ನಡೆಸುವುದಕ್ಕೆ ಸಮರ್ಥವಾಗಿವೆ. ಜೊತೆಗೆ ಇವುಗಳು ಮಾಧ್ಯಮದ ಸದುಪಯೋಗ ಪಡೆದುಕೊಳ್ಳಲು ತುದಿಗಾಲಲ್ಲೇ ನಿಂತಿವೆ ಎಂದರು.

ಮುಷರ್ರಫ್ ಅವರು ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ಪಡೆದುಕೊಂಡು, ಸಂವಿಧಾನವನ್ನು ಹಿಂತೆಗೆದುಕೊಂಡ ನಂತರ, ಮುಂಬರಲಿರುವ ಚುನಾವಣೆಗಾಗಿ ಪಾಕಿಸ್ತಾನದಲ್ಲಿ ನಿನ್ನೆಯಿಂದಲೇ ಪ್ರಚಾರ ಕಾರ್ಯವು ಆರಂಭವಾಗಿದೆ.

ಜನವರಿ 8 ರಂದು ನಡೆಯಲಿರುವ ಚುನಾವಣೆಗೆ ಕಣದಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾ ಆಯೋಗವು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಿದೆ.
ಮತ್ತಷ್ಟು
ಇರಾಕ್‌ನಲ್ಲಿ ಅಮೆರಿಕಗೆ ಸೋಲು : ಜವಾಹ್ರಿ
ಕೊಲೆ ಮೂಕದ್ದಮೆ ರದ್ದು -ಮಲೇಷಿಯಾ
ಫ್ರೆಂಚ್ ಪತ್ರಕರ್ತನ ಅಪಹರಣ
ಲಂಕಾ ದಾಳಿ: ಎಲ್ಟಿಟಿಇಯ ಪ್ರಭಾಕರನ್‌ಗೆ ಗಾಯ
ಭಾರತೀಯರ ಹಿತ ರಕ್ಷಣೆ: ಮಲೇಷ್ಯಾ ಪ್ರಧಾನಿ
ಆತ್ಮಹತ್ಯಾ ದಾಳಿ ಐವರ ಸಾವು