ಬಾಗ್ದಾದ್‌ನ ಆಗ್ನೆಯ ಭಾಗದಲ್ಲಿರುವ ದಿಯಾಲಾ ಪ್ರಾಂತ್ಯದ ಗ್ರಾಮದಲ್ಲಿ ಆಲ್‌ಕೈದಾ ಬೆಂಬಲಿಗರು ಹಾಗೂ ಗ್ರಾಮಸ್ಥರ ನಡುವೆ ನಡೆದ ಘರ್ಷಣೆಯಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಳಿಗ್ಗೆ 6 ಗಂಟೆಗೆ ಆಲ್‌ಕೈದಾ ಬೆಂಬಲಿಗರು ಎರಡು ಗ್ರಾಮಗಳಿಗೆ ದಾಳಿ ನಡೆಸಿದಾಗ ಈ ಘರ್ಷಣೆ ಸಂಭವಿಸಿ 22 ಮಂದಿ ಅಲ್‌ಕೈದಾ ಬೆಂಬಲಿಗರು ಹಾಗೂ 17 ಮಂದಿ ಗ್ರಾಮಸ್ಥರು ಮೃತರಾಗಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಖರುಲ್ಲಾ ಇಬ್ರಾಹಿಂ ತಿಳಿಸಿದ್ದಾರೆ.
ಅನಿಹಾ ಮತ್ತು ಫೈಯಾದ್ ಗ್ರಾಮಗಳು ಹಿಂದೆ ಕಟ್ಟಾ ತಾಲಿಬಾನ್ ಭದ್ರಕೋಟೆಯಾಗಿದ್ದು ನಂತರ ಅಮೆರಿಕ ಸೈನ್ಯಕ್ಕೆ ಬೆಂಬಲ ನೀಡುತ್ತಿರುವುದರಿಂದ ಅಲ್‌ಕೈದಾ ಬೆಂಬಲಿಗರು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕ ಮತ್ತು ಇರಾಕ್ ಸೇನಾಪಡೆಗಳು ಸ್ಥಳಿಯರೊಂದಿಗೆ ಬೆರೆತು ಆಲ್‌ಕೈದಾ ವಿರುದ್ದದ ಹೋರಾಟದಲ್ಲಿ ತೊಡಗಿದರಿಂದ ಉತ್ತಮ ಫಲಿತಾಂಶಗಳು ಕಂಡುಬರುತ್ತಿವೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.
|