ಪಾಕಿಸ್ತಾನದ ನೈಋತ್ಯ ಭಾಗದಲ್ಲಿರುವ ಕೋಹಾಟ್ ಪಟ್ಟಣದ ಭದ್ರತಾ ಚೆಕ್‌ಪೋಸ್ಟ್ ಬಳಿ ಆತ್ಮಹತ್ಯಾ ದಾಳಿ ನಡೆದು 10 ಮಂದಿ ಸ್ಥಳದಲ್ಲಿ ಮತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ನಾರ್ತ್‌ವೆಸ್ಟ್ ಫ್ರಂಟೈಯರ್‌ನ ಕೋಹಾಟ್ ಪಟ್ಟಣದಲ್ಲಿ ಸೇನಾ ಶಾಲೆಯ ಹತ್ತಿರ ಈ ಘಟನೆ ಸಂಭವಿಸಿದ್ದು, ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಉಗ್ರರು ದಾಳಿ ನಡೆಸುತ್ತಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.
ಸೇನಾ ಸಿಬ್ಬಂದಿಗಳು ಭದ್ರತಾ ಚೆಕ್‌ಪೋಸ್ಟ್ ಬಳಿ ಸಾಗುತ್ತಿರುವಾಗ ದಾಳಿ ನಡೆದು 10 ಮಂದಿ ಭೀಕರವಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
|