ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜ.8ರ ಚುನಾವಣೆಯಲ್ಲಿ ಭಾರಿ ಅಕ್ರಮ: ಭುಟ್ಟೋ ಶಂಕೆ
ಮುಂಬರುವ ಚುನಾವಣೆಗಳಲ್ಲಿ ಪಾಕಿಸ್ತಾನ ಸರಕಾರವು ಭಾರಿ ಪ್ರಮಾಣದಲ್ಲಿ ಚುನಾವಣಾ ಅಕ್ರಮ ಎಸಗಲಿದೆ ಎಂಬ ಬಗ್ಗೆ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಆತಂಕ ವ್ಯಕ್ತಪಡಿಸಿದ್ದಾರೆ. ಅತ್ಯಂತ ಪ್ರಮುಖವಾದ ಪಂಜಾಬ್ ಪ್ರಾಂತ್ಯದ 148ರಲ್ಲಿ 108 ಸ್ಥಾನಗಳನ್ನು ಈಗಾಗಲೇ ಆಡಳಿತಾರೂಢ ಪಿಎಂಎಲ್-ಕ್ಯೂ ಪಕ್ಷಕ್ಕೆ ನೀಡಲಾಗಿದ್ದು, ಉಳಿದ 40 ಸ್ಥಾನಗಳನ್ನು ಮಾತ್ರವೇ ಪ್ರತಿಪಕ್ಷಗಳಿಗೆ ಬಿಡಲಾಗಿದೆ ಎಂದು ಹೇಳಿದ್ದಾರೆ.

ಚುನಾವಣೆ ಫಲಿತಾಂಶಗಳು ಹಾಲಿ ಆಡಳಿತಾರೂಢ ಪಕ್ಷದ ಪರವಾಗಿ ಬರುವಂತೆ ಈಗಾಗಲೇ ಅಕ್ರಮ ಎಸಗಲಾಗಿದೆ. ಪಂಜಾಬಿನ 148 ಕ್ಷೇತ್ರಗಳಲ್ಲಿ 108ನ್ನು ಅವರಿಗೇ ನೀಡಲು ಪಂಜಾಬ್ ಸರಕಾರಕ್ಕೆ ಸೂಚಿಸಲಾಗಿದ್ದು, ನಮಗೆ ಸ್ಪರ್ಧಿಸಲು 40ರಷ್ಟು ಸ್ಥಾನ ಉಳಿದಂತಾಗುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ಮತ್ತು ನ್ಯೂಸ್ ವೀಕ್‌ನಲ್ಲಿ ಪ್ರಕಟವಾಗಿರುವ ಸಂದರ್ಶನದಲ್ಲಿ ಬೇನಜೀರ್ ತಿಳಿಸಿದ್ದಾರೆ.

ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಬೆಂಬಲಿಸುತ್ತಿರುವ ಪಿಎಂಎಲ್-ಕ್ಯೂ ಪಂಜಾಬಿನಲ್ಲಿ ಚುನಾವಣೆಯಲ್ಲಿ ವಿಜಯಿಯಾಗಲಿದೆಯೇ ಎಂದು ಕೇಳಿದಾಗ ಮಾಜಿ ಪ್ರಧಾನಿ, ಅವರು ವಿಜಯ ಗಳಿಸುವುದಿಲ್ಲ, ಮುಷರಫ್ ಸೋಲುವಂತೆ ಮಾಡುವ ವಿಶ್ವಾಸ ನಮಗಿದೆ ಎಂದರು.

ಚುನಾವಣೆಗಳಲ್ಲಿ ಭಾಗಿಯಾಗುವ ಬಗ್ಗೆ ತಮ್ಮ ರಾಜಕೀಯ ವೈರಿ ನವಾಜ್ ಶರೀಫ್ ತೆಗೆದುಕೊಂಡಿರುವ ನಿರ್ಧಾರವನ್ನು ಶ್ಲಾಘಿಸಿದ ಅವರು, ಜನವರಿ 8ರ ಚುನಾವಣೆಗಳನ್ನು ಬಹಿಷ್ಕರಿಸದೆ ಅವರು ಅತ್ಯಂತ ಧನಾತ್ಮಕ ಪಾತ್ರ ನಿರ್ವಹಿಸಿದ್ದಾರೆ ಎಂದು ನುಡಿದರು.

ಶರೀಫ್ ಪಾಕಿಗೆ ಬಂದಾಗ, ಚುನಾವಣೆ ಬಹಿಷ್ಕರಿಸುವಂತೆ ಅವರ ಮಿತ್ರಕೂಟವು ಅವರನ್ನು ಒತ್ತಾಯಿಸಿತ್ತು. ಒಂದಾಗಿ ಕೆಲಸ ಮಾಡುವಂತೆ ತಾನವರಿಗೆ ಸಲಹೆ ನೀಡಿದ್ದೆ. ನಾವೇನಾದರೂ ಚುನಾವಣೆ ಬಹಿಷ್ಕರಿಸಿದರೆ, ಮುಷರಫ್ ಬೆಂಬಲಿಗ ಬಣಕ್ಕೆ ಚುನಾವಣಾ ಅಕ್ರಮ ಎಸಗಬೇಕಾದ ಪ್ರಮೇಯವೇ ಇರುವುದಿಲ್ಲ, ಅವರೇ ಭರ್ಜರಿ ಜಯ ಗಳಿಸುತ್ತಾರೆ ಮತ್ತು ಸಂಸತ್ತಿನಲ್ಲಿ ತಮಗೆ ಬೇಕಾಗಿರುವುದನ್ನು ಮಾಡುತ್ತಾರೆ. ನಾವಿಬ್ಬರೂ ಹೋರಾಡಿದರೆ, ಅವರು ಜಯ ಗಳಿಸಲು ಭಾರೀ ಪ್ರಮಾಣದಲ್ಲಿ ಅಕ್ರಮ ಎಸಗಬೇಕಾದ ಅವಶ್ಯಕತೆ ಎದುರಾಗಲಿದೆ ಎಂದು ಮುಷರಫ್ ಬೆಂಬಲಿಗ ಪಕ್ಷಗಳನ್ನು ಉಲ್ಲೇಖಿಸಿ ಭುಟ್ಟೋ ವಿವರಿಸಿದರು.
ಮತ್ತಷ್ಟು
ಆತ್ಮಹತ್ಯಾ ದಾಳಿ 10 ಸಾವು
ಕೈದಾ ಉಗ್ರರ ಗ್ರಾಮಸ್ಥರ ನಡುವೆ ಘರ್ಷಣೆ: 39 ಸಾವು
ಮುಕ್ತ ಚುನಾವಣೆ: ಮುಷರ್ರಫ್‌ಗೆ ರೈಸ್ ಒತ್ತಾಯ
ಇರಾಕ್‌ನಲ್ಲಿ ಅಮೆರಿಕಗೆ ಸೋಲು : ಜವಾಹ್ರಿ
ಕೊಲೆ ಮೂಕದ್ದಮೆ ರದ್ದು -ಮಲೇಷಿಯಾ
ಫ್ರೆಂಚ್ ಪತ್ರಕರ್ತನ ಅಪಹರಣ