ರೈಲು ಹಳಿ ತಪ್ಪಿದ ಪರಿಣಾಮ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮೆಹ್ರಬ್‌ಪುರ್ ಎಂಬಲ್ಲಿ ಕನಿಷ್ಠ 35 ಮಂದಿ ಸಾವನ್ನಪ್ಪಿದ್ದಾರೆ. ಮತ್ತು ಹಲವಾರು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಬುಧವಾರ ಮುಂಜಾನೆ ಕರಾಚಿಯಿಂದ ಲಾಹೋರ್‌ಗೆ ಸಾಗುತ್ತಿದ್ದ ರೈಲು ಮೆಹ್ರಬ್‌ಪುರ್ ಎಂಬಲ್ಲಿಗೆ ತಲುಪುವ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.
ಒಟ್ಟು 16 ಬೋಗಿಗಳಲ್ಲಿ 12ರಲ್ಲಿ ಜನರು ತುಂಬಿ ತುಳುಕುತ್ತಿದ್ದರು. ಈದ್ ಹಬ್ಬಕ್ಕಾಗಿ ಪ್ರಯಾಣಿಕರು ತಮ್ಮತಮ್ಮ ಮನೆಗಳಿಗೆ ಸಾಗುತ್ತಿದ್ದರು ಎಂದು ವರದಿ ತಿಳಿಸಿದೆ.
|