ದೇಶದ ವಕೀಲರು , ಸಂಘ ಸಂಸ್ಥೆಗಳು ಹಾಗೂ ಜನತೆ ಒಂದಾಗಿ ಸಂವಿಧಾನಬದ್ದ ಕಾನೂನಿಗಾಗಿ ಹೋರಾಟ ನಡೆಸಬೇಕೆಂದು ಮಾಜಿ ಮುಖ್ಯನ್ಯಾಯಾಧೀಶ ಇಫ್ತೆಕಾರ್ ಮೊಹಮ್ಮದ್ ಚೌಧರಿ ತಿಳಿಸಿದ್ದಾರೆ.
ಇಫ್ತೇಕಾರ್ ಮೊಹಮ್ಮದ್ ಚೌಧರಿ ಅವರ ಮನೆಗೆ ಪ್ರತಿಭಟನಾಕಾರರು ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದಿಂದ ಜನರು ವಿಚಲಿತರಾಗುವುದಿಲ್ಲ. ಶಾಂತಿಯಿಂದ ಪ್ರತಿಭಟನೆ ನಡೆಸುವುದು ವಾಕ್ ಸ್ವಾತಂತ್ರ ಸಂವಿಧಾನ ಬದ್ದ ಹಕ್ಕಗಳಾಗಿವೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 15 ರಂದು ದೇಶದಲ್ಲಿ ತುರ್ತುಪರಿಸ್ಥಿತಿ ಹಿಂತೆಗೆದುಕೊಂಡರೂ ಸಹ ಗೃಹಬಂಧನದಿಂದ ಬಿಡುಗಡೆಗೊಳಿಸದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಚೌಧರಿ ಪತ್ರಕರ್ತರನ್ನೊಳಗೊಂಡು ಸುಮಾರು 30 ಮಂದಿ ಪೊಲೀಸ್ ದೌರ್ಜನ್ಯದಿಂದ ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಜಿ ಮುಖ್ಯನ್ಯಾಯಾದೀಶ ಇಫ್ತೆಕಾರ್ ಚೌಧರಿಯವರನ್ನು ಅಮೆರಿಕದ ರಾಷ್ಟ್ರೀಯ ಕಾನೂನು ಸಂಸ್ಥೆ ವರ್ಷದ ವಕೀಲರೆಂದು ಘೋಷಿಸಿದೆ.
|