ನ್ಯಾಟೋಪಡೆಗಳ ಒಂದು ವರ್ಷ ಅವಧಿ ವಿಸ್ತರಣೆ ಕೋರಿ ಬಾಗ್ದಾದ್ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಅವಧಿ ವಿಸ್ತರಿಸಲಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪ್ರಕಟಿಸಿದೆ.
ಮುಂಬರುವ 2008 31ನೇ ಡಿಸೆಂಬರ್‌ವರೆಗೆ ನ್ಯಾಟೋಪಡೆಗಳು ಇರಾಕ್‌ನಲ್ಲಿದ್ದು, ಇರಾಕ್ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಮನವಿಯನ್ನು ಸಲ್ಲಿಸಿದಲ್ಲಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು 15 ಮಂದಿ ಸದಸ್ಯರ ಸಮಿತಿ ತಿಳಿಸಿದೆ.
ಇರಾಕ್ ಪ್ರಧಾನಿ ನೂರಿ ಅಲ್-ಮಲಿಕಿ 7ನೇಯ ಡಿಸೆಂಬರ್‌ದಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಮ್ಮ ಅಂತಿಮ ಮನವಿಯನ್ನು ಪರಿಗಣಿಸುವಂತೆ ಕೋರಿದ್ದರು.
ಇರಾಕ್‌ನಲ್ಲಿರುವ ಪೆಟ್ರೋಲಿಯಂ ಹಾಗೂ ಅನಿಲವನ್ನು ರಫ್ತು ಮಾಡಿ ಬಂದ ಹಣದಿಂದ ಇರಾಕ್ ಅಭಿವೃದ್ಧಿಗೆ ನಿಯೋಜಿಸಲಾಗುವುದು.ಈ ವ್ಯವಹಾರಗಳನ್ನು ಅಂತಾರಾಷ್ಟ್ರೀಯ ಸಲಹಾ ಮತ್ತು ಮೇಲ್ವಿಚಾರಣಾ ಸಮಿತಿ ವಹಿಸಿಕೊಳ್ಳಲಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ.
|