ದೇಶಭ್ರಷ್ಟದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿಯಾಗಿರುವ ಚಾರ್ಲ್ಸ್ ಶೋಭರಾಜ್ ಅಂತಿಮ ತೀರ್ಪನ್ನು ನ್ಯಾಯಾಲಯ ಮುಂದೂಡಿದ್ದು, ಹಳೆಯ ನಕಲಿ ಪಾಸಪೋರ್ಟ್‌ಪ್ರಕರಣದ ವಿವರಗಳನ್ನು ನೀಡುವಂತೆ ಪೊಲೀಸ್‌ರಿಗೆ ಆದೇಶಿಸಿದೆ.
ಪ್ರಸ್ತುತವಾಗಿ ನೇಪಾಳದ ಜೈಲಿನಲ್ಲಿರುವ 63 ವರ್ಷದ ಶೋಭರಾಜ್, 1975 ರಲ್ಲಿ ಪುರುಷ ಹಾಗೂ ಮಹಿಳೆ ಒಳಗೊಂಡಂತೆ ಇಬ್ಬರು ಪ್ರವಾಸಿಗರನ್ನು ಹತ್ಯೆ ಮಾಡಿದ ಆರೋಪ ಮೇಲೆ ನೇಪಾಳ ಸುಪ್ರೀಂಕೋರ್ಟ್ ಇಂದು ಅಂತಿಮ ತೀರ್ಪನ್ನು ನೀಡಲು ನ್ಯಾಯಾಲಯ ದಿನಾಂಕವನ್ನು ನಿಗದಿಪಡಿಸಿತ್ತು.ಆದರೆ ಇಂದು ನ್ಯಾಯಾಲಯ ಪ್ರಕರಣದಲ್ಲಿ ಶೋಬರಾಜ್ ಆರೋಪಿಯಾಗಿದ್ದಾನೆ ಎಂದು ಕೂಡಾ ಹೇಳದೇ ಹಳೆಯ ಪ್ರಕರಣಗಳನ್ನು ಕೆದಕುವಂತೆ ಪೊಲೀಸ್‌ರಿಗೆ ನ್ಯಾಯಾಲಯ ಆದೇಶಿಸಿದೆ.
ಕೊಲೆಯಾದ ಡಚ್ ವ್ಯಕ್ತಿಯ ಪಾಸ್‌ಪೋರ್ಟ್‌ನೊಂದಿಗೆ ನೇಪಾಳಕ್ಕೆ ಶೋಭರಾಜ್ ಬಂದಿದ್ದಾನೆ ಎಂದು ತನಿಖೆಯ ಸಂದರ್ಭದಲ್ಲಿ ಖಚಿತವಾಗಿತ್ತು.
ನೇಪಾಳಕ್ಕೆ ಬಂದ ನಂತರ, ಕೆನಡಾದ ಮಹಿಳೆಯನ್ನು ಹಾಗೂ ಅದೇ ದೇಶದ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿತ್ತು. ಆದಾಗ್ಯೂ, ತಾವೆಂದಿಗೂ 2003 ರ ಗಿಂತ ಮೊದಲು ನೇಪಾಳಕ್ಕೆ ಬಂದಿಲ್ಲ ಎಂದು ಶೋಭರಾಜ್ ಹೇಳಿದ್ದಾನೆ ಎನ್ನಲಾಗಿದೆ.
2004 ರಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಶೋಭರಾಜ್‌ನನ್ನು ತಪ್ಪಿತಸ್ಥನೆಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪೊಲೀಸರು ಸಲ್ಲಿಸಿದ ಸಾಕ್ಷಿಯಾಧಾರದ ಮೇಲಿಂದ ನೀಡಲಾಗಿತ್ತು. ಇದಾದ ನಂತರ ತಪ್ಪಿಸಿಕೊಂಡಿದ್ದ ಶೋಭರಾಜ್‌ನನ್ನು ಇತ್ತೀಚೆಗೆ ಭಾರತದಲ್ಲಿ ಬಂಧಿಸಲಾಗಿತ್ತು.
|