ಇಸ್ರೇಲ್ ಹಾಗೂ ಪ್ಯಾಲೇಸ್ತೇನ್‌ಗಳು ಶಾಂತಿ ಮಾರ್ಗದತ್ತ ಮುನ್ನಡೆಯಬೇಕೆಂದು ಒತ್ತಾಯಿಸಲು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಜನವರಿ ತಿಂಗಳಿನಲ್ಲಿ ಜೇರುಸಲೆಮ್ ಹಾಗೂ ವೆಸ್ಟ್ ಬ್ಯಾಂಕ್‌ಗೆ ಭೇಟಿ ನೀಡಲಿದ್ದಾರೆ.
ಜನವರಿ 8 ರಿಂದ ಒಂಬತ್ತು ದಿನಗಳ ಪ್ರವಾಸ ಕಾರ್ಯ ಪ್ರಾರಂಭಿಸುವ ಬುಷ್, ಇಸ್ರೇಲ್, ವೆಸ್ಟ್ ಬ್ಯಾಂಕ್, ಕುವೈತ್, ಬಹ್ರೇನ್, ಯುಎಇ, ಸೌದಿ ಅರೇಬಿಯಾ ಹಾಗೂ ಈಜಿಪ್ತ್‌ಗೆ ಭೇಟಿ ನೀಡಲಿದ್ದಾರ. ಈಜಿಪ್ತ್‌ನ್ನು ಹೊರತುಪಡಿಸಿ ಉಳಿದ ಪ್ರದೇಶಗಳಿಗೆ ಬುಷ್ ಅಧ್ಯಕ್ಷರಾಗಿ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಬುಷ್ ಅವರ ಅಧ್ಯಕ್ಷತೆ ಸಂದರ್ಭದಲ್ಲಿ ಮಧ್ಯಪೂರ್ವ ರಾಷ್ಟ್ರದಲ್ಲಿ ಶಾಂತಿ ನೆಲೆಗೊಳ್ಳುವುದು ಬಹುಮುಖ್ಯವಾದ ವಿಚಾರವಾಗಿದೆ. ಇಸ್ರೇಲ್ ಹಾಗೂ ಪ್ಯಾಲೇಸ್ತಾನ್‌ಗಳು ಪ್ಯಾಲೇಸ್ತಾನ್‌ಗೆ ಸ್ವತಂತ್ರ ರಾಷ್ಟ್ರದ ಸ್ಥಾನ ನೀಡುವುದಾದರೆ, ಅಮೆರಿಕ ಉಭಯ ದೇಶಗಳಿಗೆ ನೆರವು ನೀಡುವುದಾಗಿ ಕಳೆದ ತಿಂಗಳು ಮೇರಿಲ್ಯಾಂಡ್‌ನ ಅಣ್ಣಾಪೊಲಿಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಬುಷ್ ಹೇಳಿದ್ದರು.
ಇಸ್ರೇಲ್ ಹಾಗೂ ಪ್ಯಾಲೇಸ್ತಾನ್‌ಗಳು ದ್ವಿಪಕ್ಷೀಯ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷರ ಈ ಭೇಟಿಯು ಮಹತ್ವ ಪಡೆದುಕೊಂಡಿದೆ.
ಇಸ್ರೇಲ್ ಹಾಗೂ ಅರಬ್ ರಾಷ್ಟ್ರಗಳ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಲ್ಲಿ ಬುಷ್ ತಮ್ಮ ಭೇಟಿ ಸಂದರ್ಭದಲ್ಲಿ ಯತ್ನ ನಡೆಸಲಿದ್ದಾರೆ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಡಾನಾ ಪೆರಿನೊ ಹೇಳಿದ್ದಾರೆ.
ಈಜಿಪ್ತ್‌ನಲ್ಲಿ ಶರ್ಮ್ ಎಲ್ ಶೇಖ್ ಅವರನ್ನು ಭೇಟಿ ಮಾಡಲಿರುವ ಬುಷ್ 2003 ರಲ್ಲಿ ಭೇಟಿ ಮಾಡಿದ ನಾಯಕರೊಂದಿಗೆ ಮತ್ತೆ ಚರ್ಚೆ ನಡೆಸಿಲಿದ್ದಾರೆ ಎಂದು ಪೆರಿನೊ ಹೇಳಿದರು.
ಜೆರುಸಲೆಮ್‌ನಲ್ಲಿ ಅಧ್ಯಕ್ಷ ಶಿಮಾನ್ ಪೆರೆಸ್ ಹಾಗೂ ಪ್ರಧಾನಮಂತ್ರಿ ಎಹುದ್ ಒಲ್ಮರ್ಟ್ ಅವರನ್ನು, ವೆಸ್ಟ್ ಬ್ಯಾಂಕ್‌ನಲ್ಲಿ ಅಧ್ಯಕ್ಷ ಮೊಹಮೂದ್ ಅಬ್ಬಾಸ್ ಹಾಗೂ ಪ್ರಧಾನಿ ಸಲಾಮ್ ಫಯ್ಯದ್ ಅವರನ್ನು ಬುಷ್ ಭೇಟಿ ಮಾಡಲಿದ್ದಾರೆ.
|