ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಲೇಷಿಯಾ: ಹೇಬಿಯಸ್ ಅರ್ಜಿ ತಿರಸ್ಕಾರ
ಹಿಂಡ್ರಾಫ್‌ನ ಐದು ಮಂದಿ ನಾಯಕರನ್ನು ಮಲೇಷ್ಯಾ ಸರಕಾರವು ಆಂತರಿಕ ಭದ್ರತಾ ಕಾಯ್ದೆಯಡಿ ಬಂಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಮೇಲ್ಮನವಿ ಅರ್ಜಿಯನ್ನು ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ.

ಭಾರತೀಯರನ್ನು ಕಡೆಗಣಿಸಲಾಗುತ್ತಿರುವುದನ್ನು ವಿರೋಧಿಸಿ ಕಳೆದ ತಿಂಗಳು ಮಲೇಷ್ಯಾ ಪ್ರತಿಭಟನೆಯಲ್ಲಿ ನಿರತರಾಗಿದ್ದ ಈ ಮಂದಿ ನಾಯಕರನ್ನು ಪೊಲೀಸರು ಐಎಸ್ಎ ಕಾಯ್ದೆಯಡಿ ಬಂಧಿಸಿದ್ದರು.

ಪ್ರತಿಭಟನಾ ನಿರತ ಭಾರತೀಯ ಸಂಘಟನೆಯಾದ ಹಿಂದು ಹಕ್ಕು ಕ್ರಿಯಾ ರಂಗ (ಹಿಂಡ್ರಾಫ್) ನಾಯಕ ಎಂ.ಮನೋಹರನ್ ಅವರ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡ ಇಪೊ ಹೈಕೋರ್ಟ್‌ನ ನ್ಯಾಯಾಧೀಶರು 'ಬಂಧನದ ಕುರಿತು ಯಾವ ಆದೇಶವನ್ನು ಇನ್ನೂ ಪ್ರಮಾಣೀಕರಿಸಿಲ್ಲ' ಎಂದು ಹೇಳಿದ್ದಾರೆ.

ಹಿಂಡ್ರಾಫ್ ನಾಯಕ ಮನೋಹರನ್ ಹಾಗೂ ಇತರ ಬಂಧಿತರ ಬಿಡುಗಡೆಗಾಗಿ ಕೌಲಾಲಂಪುರದ ಹೈಕೋರ್ಟ್‌ನಲ್ಲಿ ಮತ್ತೊಂದು ಹೊಸ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ವಿರೋಧ ಪಕ್ಷದ ಡಿಎಪಿ ಅಧ್ಯಕ್ಷ ಕರ್ಪಾಲ್ ಸಿಂಗ್ ಹೇಳಿದರು.

ಕೌಲಾಲಂಪುರದಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಉತ್ತರ ಮಲೇಷ್ಯಾದ ಕಮುಂಟಿಂಗ್ ಎಂಬಲ್ಲಿ ಭಾರತದ ಈ ಐವರು ನಾಯಕರನ್ನು ಆಂತರಿಕ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿತ್ತು. ಈ ಕಾಯ್ದೆಯಡಿ ಅಲ್ಲಿನ ಸರಕಾರವು ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸದೆ, ಕನಿಷ್ಠ ಎರಡು ವರ್ಷಗಳ ಬಂಧನದಲ್ಲಿ ಇಡಬಹುದಾಗಿದೆ.

ಹೈಕೋರ್ಟಿನ ನೀತಿ ನಿಬಂಧನೆಗಳೊಂದಿಗೆ ಇದನ್ನು ಅನುಸರಿಸಲಾಗುತ್ತಿಲ್ಲ. ಆದ್ದರಿಂದ ಅರ್ಜಿಯನ್ನು ತಿರಸ್ಕಾರ ಮಾಡಲಾಗುತ್ತಿದೆ ಎಂದು ನ್ಯಾಯಾಧೀಶರಾದ ದಾತುಕ್ ಮಹಮದ್ ಇಡರ್ಸ್ ಮಹಮದ್ ರಾಪೀ ಅವರು ಹೇಳಿದರು. ಮುನ್ನಚ್ಚೆರಿಕಾ ಕ್ರಮವಾಗಿ ನ್ಯಾಯಾಲಯದ ಆವರಣದೊಳಗೆ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು.


ಮತ್ತಷ್ಟು
ಇಸ್ರೆಲ್, ಪ್ಯಾಲಿಸ್ತೇನ್‌ಗೆ ಬುಷ್ ಪ್ರವಾಸ
ನೇಪಾಳ: ಶೋಭರಾಜ್ ತೀರ್ಪು ಅನಿರ್ಧಿಷ್ಟ ಮುಂದೂಡಿಕೆ
ಯುಎನ್: ನ್ಯಾಟೋಪಡೆಗಳ ಅವಧಿ ವಿಸ್ತರಣೆ ಅಂಗೀಕಾರ
ಸಂವಿಧಾನ ಬದ್ದ ಹೋರಾಟಕ್ಕೆ ಚೌಧರಿ ಕರೆ
ಪಾಕಿನಲ್ಲಿ ಹಳಿ ತಪ್ಪಿದ ರೈಲು: ಕನಿಷ್ಠ 35 ಸಾವು
ದೈಹಿಕ ಕಿರುಕುಳ: ಭಾರತೀಯ ದಂಪತಿಗೆ ಶಿಕ್ಷೆ