ಮುಂಬರಲಿರುವ ಸಾರ್ವತ್ರಿಕ ಚುನಾವಣೆಗಳು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯಲಾರದಂತಹ ಪರಿಸ್ಥಿತಿಯನ್ನು ಪಾಕ್ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಸೃಷ್ಟಸಿದ್ದಾರೆ ಎಂದು ಅಲ್ಲಿನ ಮಾನವ ಹಕ್ಕು ಸಮಿತಿಯು ಆರೋಪಿಸಿದೆ.
ಆಡಳಿತಾರೂಢ ಪಿಎಂಎಲ್-ಕ್ಯೂ ಪಕ್ಷವು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಂಬಂಧ ಜನವರಿ 8 ರಂದು ನಡೆಯಲಿರುವ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಸ್ಪರ್ಧೆಯ ಭಯದಿಂದಾಗಿ ಅಕ್ರಮ ನಡೆಸಲು ಚಿಂತಿಸಲಾಗುತ್ತಿದೆ. ಆದರೆ, ಚುನಾವಣೆಗಳು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯುತ್ತವೆ ಎಂದು ಮುಷ್ ಕೂಡ ಭರವಸೆ ನೀಡಿರುವುದು ಅವರ ಮಾತಿಗೆ ಹುರುಳಿಲ್ಲದಂತಾಗಿದೆ.
ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ಹಿಂತೆಗೆಯದೇ ಇರುವುದು, ನಾಗರಿಕ ಸಮಾಜದ ಕಾರ್ಯಕರ್ತರ ಬಂಧನ ಹಾಗೂ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರನ್ನು ಅಮಾನತುಗೊಳಿಸಿ ಸರಕಾರಕ್ಕೆ ಬೆಂಬಲ ಒದಗಿಸುವವರನ್ನು ನೇಮಕ ಮಾಡಿರುವ ಹಲವು ಘಟನೆಗಳನ್ನು ಗಮನಿಸಿದರೆ, ಪಕ್ಷಗಳು ಚುನಾವಣೆಗಾಗಿ ಪ್ರಮಾಣಿಕವಾದ ಪ್ರಚಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯೂಯಾರ್ಕ್ ಮೂಲದ ಮಾನವ ಹಕ್ಕು ಸಮಿತಿಯಲ್ಲಿ ದ.ಏಷ್ಯಾದ ಸಂಶೋಧಕರಾಗಿರುವ ಅಲಿ ದಯನ್ ಹಸನ್ ಹೇಳಿದ್ದಾರೆ.
'ಕಾನೂನು ನಾಶ: ವಕೀಲರು ಹಾಗೂ ನ್ಯಾಯಾಧೀಶರ ಮೇಲೆ ಪಾಕಿಸ್ತಾನ ದಬ್ಬಾಳಿಕೆ' ಎಂಬ 84 ಪುಟಗಳ ವರದಿಯನ್ನು ಬಿಡುಗಡೆಗೊಳಿಸಿರುವ ಅವರು, ನವೆಂಬರ್ 3 ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ನಂತರ, ಪೊಲೀಸರು ನಡೆಸಿದ ಹಿಂಸಾಕೃತ್ಯಗಳು, ಬಂಧಿತ ವಕೀಲರೊಂದಿಗೆ ನಡೆದುಕೊಂಡಿರುವ ರೀತಿಯನ್ನು ಗಮನದಲ್ಲಿರಿಸಿಕೊಂಡಿರುವ ಮಾನವ ಹಕ್ಕು ಸಮಿತಿಯು ಈ ನಿರ್ಧಾರಕ್ಕೆ ಬಂದಿದೆ.
|