ದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳು ಸಮಾನತೆಯ ಹಕ್ಕುಗಳಿಗಾಗಿ ಹೋರಾಡಿದ ತಮ್ಮ ಸಂಘಟನೆಯ ನಾಯಕರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಲೆ ಬೋಳಿಸಿಕೊಡು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ವಾರ ಅನಿರ್ಧಿಷ್ಟ ಕಾಲದವರೆಗೂ ಯಾವುದೇ ವಿಚಾರಣೆ ಇಲ್ಲದೇ ಬಂಧನದಲ್ಲಿಡಬಹುದಾದ ಆಂತರಿಕ ಭದ್ರತೆ ಕಾಯ್ದೆಯಡಿ ಬಂಧಿತರಾಗಿರುವ ಹಿಂದೂ ಸಂಘಟನೆಗಳ ನಾಯಕರು ಶ್ರೀಘ್ರದಲ್ಲಿ ಬಿಡುಗಡೆಯಾಗಲು ಕೌಲಾಲುಂಪುರ್‌ನ ಹೊರವಲಯದಲ್ಲಿರುವ ಬಟು ಮಂದಿರದ ಗುಹೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಹಿಂದೂಗಳು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಬಟು ಮಂದಿರದ ಗುಹೆಯಲ್ಲಿ ಸೇರಿದ್ದ ನೂರಕ್ಕೂ ಹೆಚ್ಚು ಮಂದಿಯಲ್ಲಿ 16 ಮಂದಿ ಹತ್ತಿರದಲ್ಲಿರುವ ನದಿಯ ದಂಡೆಯ ಮೇಲೆ ತಮ್ಮ ತಲೆಯನ್ನು ಬೋಳಿಸಿಕೊಂಡು ಗಾಂಧಿಯ ಭಾವಚಿತ್ರವನ್ನು ಹಿಡಿದು ಮಂದಿರವನ್ನು ಪ್ರವೇಶಿಸಿದರೆಂದು ಮೂಲಗಳು ತಿಳಿಸಿವೆ.
ತಲೆಯನ್ನು ಬೋಳಿಸಿಕೊಂಡು ಆಂತರಿಕ ಭಧ್ರತಾ ಕಾಯ್ದೆಯನ್ನು ವಿರೋಧಿಸುವುದಲ್ಲದೇ ನಮ್ಮ ನಾಯಕರು ಶ್ರೀಘ್ರದಲ್ಲಿ ಬಿಡುಗಡೆಯಾಗುವಂತೆ ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದು ಜಯತಾಸ್ ಹೇಳಿದ್ದಾರೆ.
|