ಶ್ರೀಲಂಕಾದಲ್ಲಿ ಜಾಫ್ನಾ, ಮನ್ನಾರ್, ಮತ್ತು ವಾಯುನಿಯಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ 24 ಮಂದಿ ತಮಿಳು ಉಗ್ರರು ಸಾವನ್ನಪ್ಪಿದ್ದಾರೆ ಎದು ಸೇನಾ ವಕ್ತಾರರು ತಿಳಿಸಿದ್ದಾರೆ.
ಪುಲಮುಡೈ, ಮುಲ್ಲಿಕುಲಂ, ಮತ್ತು ಥಂಪಾನೆ ನಾರಿಕುಲಮ್ ಮತ್ತು ಮನ್ನಾರ್ ಜಿಲ್ಲೆಗಳಲ್ಲಿ ನಡೆದ ಸೇನಾಪಡೆಗಳ ಮತ್ತು ಉಗ್ರರ ನಡುವಣ ಘರ್ಷಣೆಯಲ್ಲಿ 11 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಮಾಧ್ಯಮ ಕಚೇರಿಗಳು ತಿಳಿಸಿವೆ.
ಶ್ರೀಲಂಕಾದ ಸೇನಾಪಡೆಗಳೊಂದಿಗೆ ತಮಿಳು ಆಕ್ರಮಿತ ಪ್ರದೇಶದಲ್ಲಿ ಭಾರಿ ಪ್ರಮಾಣದ ಹೋರಾಟ ಮುಂದುವರೆದಿದೆ ಒಟ್ಟು 22 ಮಂದಿ ಮೃತರಾಗಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ. ಸೇನಾಪಡೆಗಳೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಹಲವು ತಮಿಳು ಉಗ್ರರು ಗಾಯಾಳುಗಳಾಗಿದ್ದಾರೆ ಎಂದು ಉಗ್ರರ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಸೇನೆ ಮತ್ತು ಉಗ್ರರ ಘರ್ಷಣೆಯಲ್ಲಿ ಹಲವಾರು ಮಂದಿ ಬಲಿಯಾಗುತ್ತಿರುವುದು ಅವಮಾನವೀಯವಾಗಿದೆ ಎಂದು ಯುರೋಪ್‌ನ ರೆಡ್ ಕ್ರಾಸ್ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
|